ಚಿಂತಾಮಣಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಡೆತ್ನೋಟ್ ಬರೆದಿಟ್ಟು ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಗಂಡನ ಮನೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಗರದ ಗಣೇಶ್ ನಗರ ಬಡಾವಣೆ ನಿವಾಸಿ ಶ್ರೀನಿವಾಸ್ ರೆಡ್ಡಿ ಪುತ್ರಿ ಮಮತಾಶ್ರೀ (26) ಮೃತೆ.
ಮಮತಾಶ್ರೀಗೆ 5 ವರ್ಷಗಳ ಹಿಂದೆ ನಗರದ ಮೋಹನ್ರೆಡ್ಡಿ ಅವರೊಂದಿಗೆ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗು ಇದೆ. ಕೆಲವು ದಿನಗಳಿಂದ ಇಬ್ಬರ ನಡುವೆ ಮುನಿಸಿತ್ತು. ಹೀಗಾಗಿ ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಡೆತ್ನೋಟನಲ್ಲಿ ಮಗುವನ್ನು ತನ್ನ ಪಾಲಕರ ವಶಕ್ಕೆ ನೀಡುವಂತೆ ಹಾಗೂ ಅಂತ್ಯಸಂಸ್ಕಾರದಲ್ಲಿ ಗಂಡ ಪಾಲ್ಗೊಳ್ಳುದಂತೆ ಬರೆದಿದ್ದಾಳೆ ಎನ್ನಲಾಗಿದೆ. ತಹಸೀಲ್ದಾರ್ ಸುದರ್ಶನ್ ಯಾದವ್, ಸ್ಥಳಿಯ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.