ದಸರಾ ಹಬ್ಬಕೆ ಮನೆಗಳ ಹಸ್ತಾಂತರ: ಜೊಲ್ಲೆ ಭರವಸೆ

ದಸರಾ ಹಬ್ಬಕೆ ಮನೆಗಳ ಹಸ್ತಾಂತರ: ಜೊಲ್ಲೆ ಭರವಸೆ
ದಸರಾ ಹಬ್ಬಕೆ ಮನೆಗಳ ಹಸ್ತಾಂತರ: ಜೊಲ್ಲೆ ಭರವಸೆ
Published on

ಪ್ರಮುಖ ಮುಖ್ಯಾಂಶಗಳು

  • ದಸರಾ ಹಬ್ಬಕೆ ವಸತಿ ಮನೆಗಳ ಹಸ್ತಾಂತರ
  • ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಭರವಸೆ
  • ಅರ್ಹರಿಗೆ ಮನೆ ವಿತರಣೆ ಬದ್ಧ ಎಂದು ಜೊಲ್ಲೆ ತಿಳಿಸಿದ್ದಾರೆ
ದಸರಾ ಹಬ್ಬಕ್ಕೆ ಮನೆಗಳ ಹಸ್ತಾಂತರ
| ಶಾಸಕಿ ಶಶಿಕಲಾ ಜೊಲ್ಲೆ ಭರವಸೆ
ಚಿಕ್ಕೋಡಿ: ಪ್ರಧಾನಮಂತ್ರಿ ಆವಾಸ್ ಯೋಜನೆ ನಿಪ್ಪಾಣಿ-ಪಟ್ಟಣಕುಡಿ ಮಾದರಿ ಪ್ರದೇಶದಲ್ಲಿ 'ಜಿ+೨' ನಿರ್ಮಿಸಲಾಗುತ್ತಿರುವ ವಸತಿ ಯೋಜನೆ ಮನೆಗಳ ಹಂಚಿಕೆ ಪ್ರಕ್ರಿಯೆಗೆ ವೇಗ ನೀಡುತ್ತದೆ.ಪ್ರಥಮ ಹಂತದಲ್ಲಿ ಅರ್ಹತೆ ಪಡೆದ 6000 ಫಲಾನುಭವಿಗಳಿಗೆ ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲೇ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆಗೆ ತಿಳಿಸಿರುವ ಅವರು ಪ್ರತಿಯೊಬ್ಬ ಬಡವರು ಹಾಗೂ ಅರ್ಹ ಕುಟುಂಬಕ್ಕೂ ಸ್ವಂತ ಮನೆಯ ಹಕ್ಕು ಸಿಗಬೇಕು ಮತ್ತು ಅವರ ಜೀವನ ಸುಖಮಯವಾಗಬೇಕು ಎಂಬುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ಈ ಬೃಹತ್ ವಸತಿ ಯೋಜನೆಯಡಿ ಒಟ್ಟು 1,812 ಮನೆಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಸುಮಾರು 600 ಮನೆಗಳ ನಿರ್ಮಾಣ ಕಾಮಗಾರಿ ಇದೆ. ಮತ್ತು ಇನ್ನಷ್ಟು 200 ಮನೆಗಳು ಅಂತಿಮ ಹಂತದಲ್ಲಿವೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಸ್ವಂತ ಸೂರಿನ ಆಸರೆಯನ್ನು ಕಲ್ಪಿಸುವುದೇ ಈ ಯೋಜನೆ ಮುಖ್ಯ ಗುರಿಯಾಗಿದೆ.
ವಸತಿ ಯೋಜನೆಯಡಿ ನಿಗದಿತ ನಾಲ್ಕು ಕಂತುಗಳನ್ನು ಪಾವತಿಸಿದ 1,021 ಅರ್ಜಿದಾರರ ಅರ್ಹತಾ ಪರಿಶೀಲನೆಯನ್ನು ನಿಪ್ಪಾಣಿ ನಗರಸಭೆ ಆಡಳಿತ ಮಂಡಳಿ ಯಶಸ್ವಿಯಾಗಿ ಪೂರ್ಣಗೊಂಡಿದೆ ನಡೆಸಿ, ಅರ್ಹರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಸಾಮಾನ್ಯ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಅವರು ಪ್ರಕಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net