ಮನೆ ಬೀಗ ಮುರಿದು ಚಿನ್ನ, ನಗದು ಕಳವು

House locked, gold and cash stolen
House locked, gold and cash stolen
Published on
ಮುಳಬಾಗಿಲು: ಶಿಕ್ಷಕರ ಕಾಲನಿಯ ರವಿ ಅವರ ಮನೆಗೆ ಗುರುವಾರ ಕಳ್ಳರು ನುಗ್ಗಿ 50 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಮತ್ತು 1.70 ಲಕ್ಷ ರೂ. ನಗದು ದೋಚಿದ್ದಾರೆ.
ಸೋಮವಾರ ರವಿ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದು, ಗುರುವಾರ ವಾಪಸ್​ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.20ರಂದು ಇದೇ ಕಾಲನಿಯಲ್ಲಿರುವ ಶ್ರುತಿ ಅವರ ಮನೆಗೆ ನುಗ್ಗಿರುವ ಕಳ್ಳರು 158 ಗ್ರಾಂ ಚಿನ್ನ, 15 ಸಾವಿರ ನಗದು ದೋಚಿದ್ದಾರೆ. ಈ ಪ್ರಕರಣ ಪತ್ತೆ ಹಚ್ಚುವ ಮೊದಲೇ ಪೊಲೀಸರಿಗೆ ಮತ್ತೊಂದು ಪ್ರಕರಣ ಸವಾಲಾಗಿದೆ.
ಬೈರಕೂರು, ಇರಗಮುತನಹಳ್ಳಿ ಸೇರಿ ಹಲವಾರು ಹಳ್ಳಿಗಳಲ್ಲಿ ನಡೆದಿರುವ ಕಳವು ಪ್ರಕರಣಗಳಲ್ಲಿ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net