ಮನೆ ಬೀಗ ಒಡೆದು ಕಳ್ಳತನ CRIME theft

Crime theft ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಕಳ್ಳರು ಮನೆ ಬೀಗ ಒಡೆದು, ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ.
Published on
Crime theft ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಕಳ್ಳರು ಮನೆ ಬೀಗ ಒಡೆದು, ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ.
ಸೋಮವಾರ ರಾತ್ರಿ ಕಾಳಿದಾಸ ನಗರದ ನಿವಾಸಿ ಓಬಳಮ್ಮ ಕೆಳಗಡೆ ಮನೆಗೆ ಬೀಗ ಹಾಕಿ, ಮೊದಲ ಮಹಡಿಯಲ್ಲಿ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಒಡೆದು, ಮೊಮ್ಮಗಳ ಕಾರ್ಯಕ್ರಮ ಒಂದಕ್ಕೆ ಎತ್ತಿಟ್ಟಿದ್ದ ಎರಡು ಲಕ್ಷ ನಗದು ಮತ್ತು ಚಿನ್ನಾಭರಣ ಕದ್ದೊಯ್ದಿದ್ದಾರೆ. ಓಬಳಮ್ಮ ಪಟ್ಟಣದಲ್ಲಿ ಹಲವು ವರ್ಷಗಳಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೆಂದು ತಿಳಿದ್ದು, ಪಾವಗಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net