ಮನೆಗೆ ಕನ್ನ ಹಾಕಿ ನಗದು, ಚಿನ್ನಾಭರಣ ಕಳವು

ಬೇಲೂರು ತಾಲೂಕು ಅರೇಹಳ್ಳಿ ಪಟ್ಟಣದ ರಾಮನಗರದ ಮನೆಯೊಂದರಲ್ಲಿ ಬೀರು ಒಡೆದು ನಗದು, ಚಿನ್ನಾಭರಣ ದೋಚಿರುವುದು.
ಬೇಲೂರು ತಾಲೂಕು ಅರೇಹಳ್ಳಿ ಪಟ್ಟಣದ ರಾಮನಗರದ ಮನೆಯೊಂದರಲ್ಲಿ ಬೀರು ಒಡೆದು ನಗದು, ಚಿನ್ನಾಭರಣ ದೋಚಿರುವುದು.
Published on
ಬೇಲೂರು: ತಾಲೂಕಿನ ಅರೇಹಳ್ಳಿ ಪಟ್ಟಣದ ರಾಮನಗರದ ಮನೆಯೊಂದಕ್ಕೆ ಕನ್ನ ಹಾಕಿರುವ ಖದೀಮರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ತಾಲೂಕಿನ ಅರೇಹಳ್ಳಿ ಪಟ್ಟಣದ ರಾಮನಗರ ನಿವಾಸಿಗಳಾದ ಮಂಜಪ್ಪ ಹಾಗೂ ಗವಿಯಪ್ಪ ತಮ್ಮ ಹಿರಿಯ ಸಹೋದರ ಮಂಗಳೂರಿನಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆಂದು ಮಂಗಳವಾರ ಬೆಳಗ್ಗೆ ಕುಟುಂಬ ಸಮೇತ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಖದೀಮರು ಮಧ್ಯಾಹ್ನದ ವೇಳೆ ಮನೆಯ ಹೆಂಚು ತೆಗೆದು ಒಳ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಶಾಲೆಗೆ ಹೋಗಿದ್ದ ಸಹೋದರನ ಮಗಳು ಸಂಜೆ ಮನೆಗೆ ಬಂದು ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬಾಲಕಿ ಮಂಗಳೂರಿನಲ್ಲಿದ್ದ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ವಾಪಸ್ ಬಂದು ಪರಿಶೀಲಿಸಿದ ನಂತರ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net