ಉಪನ್ಯಾಸಕ ಸಂಘದ ಅಧ್ಯಕ್ಷರಾಗಿ ಹೊಸ್ಮನಿ ಆಯ್ಕೆ

ರವೀಂದ್ರನಾಥ ಹೊಸಮನಿ
ರವೀಂದ್ರನಾಥ ಹೊಸಮನಿ
Published on
ಯಾದಗಿರಿ : ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜಿಲ್ಲಾ ಸಂಘದ 2026-31ನೇ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರು ಸೇರಿದಂತೆಯೇ ಎಲ್ಲ ಒಂಬತ್ತು ಜನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಲ್ಲಯ್ಯ ಸ್ವಾಮಿ ಮಠಪತಿ ತಿಳಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಹುದ್ದೆಗಳಾಗಿ 9 ಜನರು ನಾಮಪತ್ರ ಸಲ್ಲಿಸಿದ್ದರು. ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಈ ಎಲ್ಲ ಒಂಬತ್ತು ಜನರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾಗಿ ಅವರು ಹೇಳಿದರು. ಡಾ.ರವೀಂದ್ರನಾಥ ಹೊಸಮನಿ (ಜಿಲ್ಲಾಧ್ಯಕ್ಷ ), ಸುದರ್ಶನರೆಡ್ಡಿ (ಕಾರ್ಯಾಧ್ಯಕ್ಷ), ನಿರ್ಮಲಾ ಸಿನ್ನೂರ್​(ಉಪಾಧ್ಯಕ್ಷ), ರವೀಂದ್ರ ಎನ್​.ಗುತ್ತೇದಾರ್​ (ಖಜಾಂಚಿ), ಅಮರೇಶ ಭಂಗೂರ(ಪ್ರಧಾನ ಕಾರ್ಯದರ್ಶಿ), ರುದ್ರಗೌಡ ಬಿರಾದಾರ (ಪ್ರಧಾನ ಸಂ.ಕಾರ್ಯದರ್ಶಿ), ಚಂದ್ರಶೇಖರ ಡೊಣ್ಣೆಗೌಡ (ಕಾರ್ಯದರ್ಶಿ), ಮರೆಪ್ಪ ನಾಯ್ಕೋಡಿ ಜಂಟಿ ಕಾರ್ಯದರ್ಶಿ ಮತ್ತು ಸೋಫಿಸಾಬ್​ ಗುತ್ತೇದಾರ್​ (ಸಂಚಾಲಕ)ರಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net