ಬಸವಕಲ್ಯಾಣದ ಬಸವ ವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರೈತರಿಗೆ ತರಕಾರಿ ಬೀಜಗಳನ್ನು ಶಾಸಕ ಶರಣು ಸಲಗರ ವಿತರಿಸಿದರು. ರಮೇಶ್ ಸುಲ್ಪಿ, ವೈಜಂತಾ ಕದಮ, ಸಂತೋಷ ಕೊರಳ್ಳೆ, ಸಚಿನ ಮೂಲಗೆ, ಆಕಾಶ ಬಿರಾದಾರ, ಶಿವಕುಮಾರ ಅಗ್ರೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಶರಣು ಸಲಗರ ಅಭಿಪ್ರಾಯ
ಕಲ್ಯಾಣದಲ್ಲಿ ತರಕಾರಿ ಬೀಜಗಳ ವಿತರಣೆ
ಬಸವಕಲ್ಯಾಣ
ರೈತರು ಸರ್ಕಾರದ ಯೋಜಗಳ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಬಸವ ವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರೈತರಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಬೀಜ ವಿತರಿಸಿ ಮಾತನಾಡಿದ ಅವರು, ಆರೋಗ್ಯಪೂರ್ಣ ಜೀವನಕ್ಕೆ ತೋಟಗಾರಿಕೆ ಬೆಳೆ ಮುಖ್ಯ ಎಂದರು.
ತೋಟಗಾರಿಕೆ ಬೆಳೆ ಬೆಳೆಯುವದು ಕಷ್ಟದ ಕೆಲಸವಾಗಿದೆ. ಕಾಳಜಿಯಿಂದ ಬೆವರು ಸುರಿಸಿ ಬೆಳೆದ ಬೆಳೆ ಒಮ್ಮೊಮ್ಮೆ ಮಳೆಯಿಂದಾಗಿ ಹಾಳಾಗುತ್ತದೆ. ಕಷ್ಟ ನಷ್ಟ ಎದುರಾದಾಗ ತಾಳ್ಮೆ ಮತ್ತು ಧೈರ್ಯದಿಂದ ಇರಬೇಕು. ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ. ರೈತರ ಪರವಾಗಿ ವಿಧಾನ ಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ನಿಮ್ಮೊಂದಿಗೆ ಸರ್ಕಾರವಿದೆ. ನಾನಿದ್ದೇನೆ ಎಂದು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ ಸುಲ್ಪಿ, ತೋಟಗಾರಿಕೆ ಸಹಾಯ ನಿರ್ದೇಶಕಿ ವೈಜಂತಾ ಕದಮ, ಅಧಿಕಾರಿ ಸಂತೋಷ ಕೊರಳ್ಳೆ, ಸಚಿನ ಮೂಲಗೆ, ಆಕಾಶ ಬಿರಾದಾರ ಇದ್ದರು. ಅಶ್ವಿನಿ ಸ್ವಾಗತಿಸಿ ನಿರೂಪಣೆ ಮಾಡಿದರು.
ತಕ್ಷಣ ಭೇಟಿ ನೀಡಿ
ರೈತರ ಬೆಳೆ ಬೆಳೆ ಹಾನಿಗೊಳಗಾದಾಗ ಮಾಹಿತಿ ಸಿಕ್ಕ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಬೇಕು ಎಂದು ಶಾಸಕ ಶರಣು ಸಲಗರ ಸಲಹೆ ಸೂಚಿಸಿದರು. ಕಾರ್ಯಕ್ರಮದಲ್ಲಿ ರೈತರೊಬ್ಬರು ವಿಷಯ ಪ್ರಸ್ತಾಪಿಸಿದಾಗ, ಹಾನಿ ಕುರಿತ ಪರಿಶೀಲನೆ, ಸಮೀೆ, ಪರಿಹಾರಕ್ಕಾಗಿ ಪ್ರಕ್ರಿಯೇಗಳು ನಡೆಯಲಿ. ಆದರೆ ಇದೆಲ್ಲಕ್ಕೂ ಮುಖ್ಯವಾಗಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು.ಇದರಿಂದ ರೈತರಿಗೆ ನೈತಿಕ ಬಲ ಸಿಕ್ಕಂತಾಗುತ್ತದೆ. ಕಷ್ಟ&ನಷ್ಟದ ಸಮಯದಲ್ಲಿ ಸರ್ಕಾರ ನಮ್ಮೊಂದಿಗಿದೆ ಎನ್ನುವ ಭರವಸೆ ಮೂಡಲು ಸಹಕಾರಿಯಾಗುತ್ತದೆ ಎಂದರು.