ಸಂಡೂರಿನಲ್ಲಿ ಭೀಕರ ಅಪಘಾತ; ಪಾದಚಾರಿಗಳ ಮೇಲೆ ಹರಿದ ಟಿಪ್ಪರ್: ಸ್ಥಳದಲ್ಲೇ ಇಬ್ಬರು ಸಾವು | Sandur
ಘಟನೆಯ ಸ್ಥಳ
Published on:
Copied
Follow Us
ಬಳ್ಳಾರಿ: ಜಿಲ್ಲೆಯ ಸಂಡೂರು(Sandur) ತಾಲೂಕಿನಲ್ಲಿ ಶುಕ್ರವಾರ(ಆ. 07) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಟಿಪ್ಪರ್ ಒಂದು ಹರಿದು ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದ ಬಳಿ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಹಂಪಿನಕಟ್ಟೆ ಗ್ರಾಮದ ನಿವಾಸಿಗಳಾದ ಕುಮಾರ್(34) ಮತ್ತು ಮಂಜುನಾಥ(38) ಮೃತಪಟ್ಟ ದುರ್ದೈವಿಗಳು.
ವೆಂಕಟಗಿರಿ ಗ್ರಾಮದ ಸೀತಾಬಾಯಿ ಎಂಬುವರ ಹೊಲದ ಹತ್ತಿರದ ರಸ್ತೆಯಲ್ಲಿ ಇಬ್ಬರೂ ಪಾದಚಾರಿಗಳು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದಿರುವ ಟಿಪ್ಪರ್ ಹಿಂಬದಿಯಿಂದ ಇಬ್ಬರಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.