ವಾರ್ಡ್ 18ರ ತಳ್ಳಿ ರಸ್ತೆ, ಅತ್ತಿಬೆಲೆ ರಸ್ತೆಗಳಲ್ಲಿ ಕಸ ಹಾಕಿದವರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಯಮನ ವೇಷಧಾರಿಯ ಜತೆಗೆ ಹೋಗಿ ಕಸವನ್ನು ಹಾಕುವುದರಿಂದ ಆಗುವ ತೊಂದರೆ ಬಗ್ಗೆ ತಿಳಿಸಲಾಯಿತು. ಕಸದ ತೊಟ್ಟಿಗಳಲ್ಲಿ ಕಸ ಹಾಕಬೇಕು, ಯಾವುದೇ ಕಾರಣಕ್ಕೂ ರಸ್ತೆಯ ಅಕ್ಕಪಕ್ಕದಲ್ಲಿ ಎಸೆಯಬಾರದು ಎನ್ನುವ ಸಂದೇಶವನ್ನು ಯಮನವೇಷ ಧರಿಸಿದ್ದ ಕಲಾವಿದ ತಿಳಿಸಿದರು. ಪಟ್ಟಣದಾದ್ಯಂತ ಕಸ ಹಾಕಲು ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ, ಆದರೂ ಜನ ಕಸ ಎಸೆಯುತ್ತಿದ್ದು, ಇನ್ನು ಮುಂದೆ ಕಸವನ್ನು ಎಸೆದು ಹೋಗುವವರಿಗೆ, ರಸ್ತೆಯ ಅಕ್ಕಪಕ್ಕದಲ್ಲಿ ಕಸ ಹಾಕುವವರಿಗೆ ನಿರಂತರವಾಗಿ ಜಾಗೃತಿ ಮೂಡಿಸಲಿದ್ದಾರೆ ಪುರಸಭೆ ಸಿಬ್ಬಂದಿ.