ಪ್ರಾಮಾಣಿಕ ಸೇವಾ ಕಾರ್ಯದಿಂದ ಗೌರವ

ಶ್ರೀರಂಗಪಟ್ಟಣದ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಸೋಮವಾರ ಕಾವೇರಿ ತೀರದ ವಿಶೇಷ ಚೇತನರ ಟ್ರಸ್ಟ್ ವತಿಯಿಂದ ್ಲ ಅಂಗವಿಕಲ ಸದಸ್ಯರಿಗೆ ಕಿಟ್ ವಿತರಿಸಿ ಸನ್ಮಾನಿಸಲಾಯಿತು. ವಿನಯ್ ಕುಮಾರ್, ಕೊತ್ತತ್ತಿ ರಾಜು, ಮಂಜುನಾಥ್, ಮೀಸೆ ನಾಗರಾಜಣ್ಣ ಇತರರು ಇದ್ದರು.
ಶ್ರೀರಂಗಪಟ್ಟಣದ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಸೋಮವಾರ ಕಾವೇರಿ ತೀರದ ವಿಶೇಷ ಚೇತನರ ಟ್ರಸ್ಟ್ ವತಿಯಿಂದ ್ಲ ಅಂಗವಿಕಲ ಸದಸ್ಯರಿಗೆ ಕಿಟ್ ವಿತರಿಸಿ ಸನ್ಮಾನಿಸಲಾಯಿತು. ವಿನಯ್ ಕುಮಾರ್, ಕೊತ್ತತ್ತಿ ರಾಜು, ಮಂಜುನಾಥ್, ಮೀಸೆ ನಾಗರಾಜಣ್ಣ ಇತರರು ಇದ್ದರು.
Published on
ಶ್ರೀರಂಗಪಟ್ಟಣ: ಸಂಘಟನೆಗಳು ಅಸಹಾಯಕರಿಗೆ ನೆರವು ಒದಗಿಸುವ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಿದಾಗ ಗೌರವಕ್ಕೆ ಪಾತ್ರವಾಗುತ್ತವೆ ಎಂದು ಮಂಡ್ಯದ ಎಲ್ಲರೊಳು ಒಂದಾಗು ಮಂಕು ತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಗಣರಾಜ್ಯೋತ್ಸವ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯಕ್ತ ಕಾವೇರಿ ತೀರದ ವೀಶೆಷ ಚೇತನರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಂಗವಿಕಲ ಸದಸ್ಯರಿಗೆ ಕಿಟ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗವಿಕಲತೆ ಎಂಬುದು ಕೆಲವರಲ್ಲಿ ದೈಹಿಕವಾಗಿ ಬಾಧಿಸುತ್ತದೆ ಹೊರತು ಮಾನಸಿಕವಾಗಿ ಅವರು ಸದೃಢರಾಗಿರುತ್ತಾರೆ. ಆದರೆ ಸಮಾಜ ಮತ್ತು ಸರ್ಕಾರವು ಅವರನ್ನು ಸಮಾನತೆಯಿಂದ ಕಾಣುವ ಜತೆಗೆ ವಿಶೇಷ ಚೇತನರಲ್ಲಿ ಭರವಸೆ, ಭದ್ರತೆ ಹಾಗೂ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸುವ ಕಾರ್ಯ ನಿರ್ವಹಿಸುದಾಗ ಅವರು ಸಹ ಸಾಧನೆಯ ಹಾದಿಯಲ್ಲಿ ನಡೆಯಲು ನೆರವಾಗುತ್ತಾರೆ. ಈ ನಿಟ್ಟಿನಲ್ಲಿ ಕಾವೇರಿ ತೀರದ ವಿಶೇಷ ವಿಕಲ ಚೇತನರ ಟ್ರಸ್ಟ್‌ನ ಕಾರ್ಯ ಸದಸ್ಯರನ್ನು ಗುರುತಿಸಿ ಅವರಿಗೆ ಬೆಂಬಲವಾಗಿ ನಿಂತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ನಾರಾಯಣ್ ಮಾತನಾಡಿಞ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಶೇ.5% ರಷ್ಟು ಅನುದಾನ ನೀಡಲಾಗುತ್ತಿದ್ದು, ಇದರ ಸಹಕಾರದಲ್ಲಿ ಇವರು ಸಂಘಟಿತರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದರು.

ಟ್ರಸ್ಟ್‌ನ ಖಜಾಂಚಿ ಮರಳಗಾಲ ಮಂಜುನಾಥ್ ಮಾತನಾಡಿ, ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲೂ ಅಂಗವಿಕಲರಿಗೆ ಶೆ.5%ರಷ್ಟು ಅನುದಾನ ನೀಡುತ್ತಿಲ್ಲ. ಜತೆಗೆ ತಾಲೂಕು ಆಡಳಿತ ಸಹ ನಮ್ಮನ್ನು ಪರಿಗಣಿಸಿಲ್ಲ. ಈ ಬಗ್ಗೆ ಕುಂದುಕೊರತೆ ಸಭೆಯಲ್ಲೂ ಸಹ ಪ್ರಸ್ತಾಪಿಸಿ ಪರಿಗಣಿಸುವಂತೆ ಒತ್ತಾಯಿಸಲಾಗಿದೆ. ಇನ್ನಾದರೂ ತಾಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ 80ಕ್ಕೂ ಹೆಚ್ಚು ಸದಸ್ಯರಿಗೆ ಆಹಾರ ಕಿಟ್ ವಿತರಿಸಿ ಸನ್ಮಾನಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಗಾಯತ್ರಿ ಶಿವರಾಂ, ಸೌಹಾರ್ದ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ಗುರುರಾಜ್, ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಜಿಲ್ಲಾ ಸದಸ್ಯೆ ವೀಣಾ ಶಂಕರ್, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಾಮು ಗಂಜಾಂ, ಸಾಹಿತಿ ಕೊತ್ತತ್ತಿ ರಾಜು, ಟ್ರಸ್ಟಿನ ಕಾರ್ಯದರ್ಶಿ ಗೋವಿಂದರಾಜು, ನಿರ್ದೇಶಕಿ ರಾಜಮ್ಮ ಇತರರು ಈ ವೇಳೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net