ಎಚ್.ಎಂ.ಟಿ. ವಶದಲ್ಲಿರುವ ಭೂಮಿಯಲ್ಲಿ ಅರಣ್ಯ ಇದೆಯೇ, ಕಟ್ಟಡಗಳು ಮಾತ್ರ ಇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನೇ ಖುದ್ದು ಈ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ, ಎಚ್.ಎಂ.ಟಿ. ಅಧಿಕಾರಿಗಳೇ ನನಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಆಗಲೂ ಕುಮಾರಸ್ವಾಮಿ, ಖಂಡ್ರೆ ಎಚ್.ಎಂ.ಟಿ.ಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಪುಷ್ಪಗುಚ್ಛ ನೀಡಿ ಕರೆದುಕೊಂಡು ಹೋದ ಮೇಲೆ ಅತಿಕ್ರಮಣ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.