ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣಗಳಾದ ರಾಯಚೂರಿನ ಕಲ್ಲಾನೆ, ಮಲಿಯಾಬಾದ್ ಕಲ್ಲಾನೆ, ರಾಯಚೂರು ಕೋಟೆ, ಜಲದುರ್ಗ ಕೋಟೆ, ಗುಬ್ಬರ್ ಬೆಟ್ಟ ಕೋಟೆ ದರ್ವಾಜ, ನವರಂಗ ದರ್ವಾಜ ಹಾಗೂ ಮಾವಿನ ಕೆರೆಯ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಅಲ್ಲದೆ, ಜಿಲ್ಲೆಯ ಪ್ರಗತಿಯ ಸಂಕೇತಗಳಾದ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳ ಚಿತ್ರಗಳನ್ನು ಸಹ ಕಲಾವಿದರು ಅತ್ಯಂತ ಮನಮೋಹಕವಾಗಿ ರಚಿಸಿ ಪ್ರದರ್ಶಿಸಿದರು.