ಐತಿಹಾಸಿಕ ನಾಟಕೋತ್ಸವ ರಂಗಭೂಮಿ ಪ್ರಸ್ತುತತೆಗೆ ಸಾಕ್ಷಿ - ಕೆ.ವಿ. ನಾಗರಾಜ್ ಮೂರ್ತಿ

Natakostava
Natakostava
Published on

ಪ್ರಮುಖ ಮುಖ್ಯಾಂಶಗಳು

  • * ‘ರಣದುಂದುಭಿ’ ಹಾಗೂ ‘ವರ ಭ್ರಷ್ಟ’ ನಾಟಕಗಳ ಪ್ರದರ್ಶನ
ಬೆಂಗಳೂರು: ಇಂದಿನ ಒತ್ತಡದ ಬದುಕಿನಲ್ಲಿ ಜೀವನದ ಮೌಲ್ಯಗಳನ್ನು ತಿಳಿಸುವಂತಹ ಐತಿಹಾಸಿಕ ನಾಟಕಗಳು ಮಾಯನಗರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇದು ಇಂದಿನ ಕೃತಕ ಬುದ್ಧಿಮತ್ತೆ (ಏಐ) ಯುಗದಲ್ಲೂ ರಂಗಭೂಮಿಯ ಪ್ರಸ್ತುತತೆಗೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಐತಿಹಾಸಿಕ ನಾಟಕೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರಣದುಂದುಭಿ’ ಹಾಗೂ ‘ವರ ಭ್ರಷ್ಟ’ ಎಂಬ ಈ ಐತಿಹಾಸಿಕ ನಾಟಕೋತ್ಸವ ಅಯೋಜಿಸಿರುವ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಇಂತಹ ಐತಿಹಾಸಿಕ ನಾಟಕಗಳನ್ನು ಏರ್ಪಡಿಸಿ ಕಲೆಯನ್ನು ನಿರಂತರವಾಗಿಸುವುದರ ಜತೆಗೆ ಮುಂದಿನ ಪೀಳಿಗೆಗೆ ಜೀವಂತವಾಗಿ ಇಡಲು ಶ್ರಮಿಸುತ್ತಿರುವ ಅಮ್ಮನ ಮಡಿಲು ಟ್ರಸ್ಟ್‌ನ ಕಾರ್ಯ ಅಭಿನಂದನಾರ್ಹ ಎಂದರು.
ಟ್ರಸ್ಟ್ ಅಧ್ಯಕ್ಷೆ ವರಲಕ್ಷ್ಮಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆಯಾಗಿದ್ದು, ನೂರಾರು ನಾಟಕ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಲಾವಿದೆಯಾಗಿ ಕೆಲಸ ಮಾಡಿತ್ತಿದ್ದು, ಇವರ ಕಲಾ ಸೇವೆ ಗುರುತಿಸಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಆರ್. ಚಂದ್ರಶೇಖರ್, ಕಲಾ ಟ್ರಸ್ಟ್ ಆಧ್ಯಕ್ಷೆ ವರಲಕ್ಷ್ಮಿ ಡಿ. ರಾಜು, ವಕೀಲ ಮುನಿರಾಜು, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net