_1778854969865.webp?w=480&auto=format%2Ccompress&fit=max)
_1778854969865.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಡಾ.ಸಿ.ಎ.ಹಿರೇಮಠ,ಶಿವಮೊಗ್ಗ :ಭರತಖಂಡವುಧರ್ಮಬೀರುಗಳ ಆಗರ.ಆಚಾರ್ಯರು,ಋಷಿ ಮಹರ್ಷಿಗಳು,ಸಂತ ಮಹಾಂತರುಅವತರಿಸಿದ ಪುಣ್ಯಭೂಮಿ. ಧರ್ಮದ ಆದರ್ಶಮೌಲ್ಯಗಳ ಪರಿಪಾಲನೆ ಮುಕ್ತಿಮಾರ್ಗದ ರಹದಾರಿ. ಸತ್ಯಶುದ್ಧನಡೆ-ನುಡಿಗಳುಮಾನವನ ಆತ್ಮಸಾಕ್ಷಾತ್ಕಾರಕ್ಕೆಸೋಪಾನ. ಸರ್ವಧರ್ಮಗಳಸಾರ ಮಾನವ ಕಲ್ಯಾಣ. ಸಕಲ ಜೀವಾತ್ಮರಿಗೆಸರ್ವದಾ ಶ್ರೇಯಸ್ಸನ್ನೇ ಬಯಸಿದ ಮನುಕುಲದ ಸರ್ವರಿಗೂ ಮುಕ್ತವಾದಧರ್ಮಾಚರಣೆಗೆ ಅವಕಾಶವನ್ನಿತ್ತ ಶ್ರೀಜಗದ್ಗುರು ರೇಣುಕಾದಿಪಂಚಾಚಾರ್ಯರು ಭೂಮಂಡಲದಲ್ಲಿವೀರಶೈವ ಸಿದ್ಧಾಂತವನ್ನು ಸಂಸ್ಥಾಪಿಸಿಅಂದಿನಿಂದ ಇಂದಿನವರೆಗೆ ಪಂಚಪೀಠಗಳಮೂಲಕ ಮನುಕುಲದ ಸಮಸ್ತ ಶ್ರದ್ಧಾವಂತರಿಗೂಆಧ್ಯಾತ್ಮದ ಅರಿವನ್ನು ಅರುಹಿದ್ದಾರೆ.
ಇಂಥಜಗದಾಚಾರ್ಯರು ಭಕ್ತಗಣಕ್ಕೆದರ್ಶನ ದಯಪಾಲಿಸಿ,ಸುಖ-ಶಾಂತಿ-ಸಮೃದ್ಧಿಯಬದುಕಿಗೆ ಹರಸುವುದು ಪರಂಪರಾಗತಪದ್ಧತಿ. ಪ್ರತಿಗ್ರಾಮದಲ್ಲಿಯೂ ಪೀಠಾಚಾರ್ಯರುಆಗಮಿಸಿದಾಗ ಪ್ರತಿಯೊಂದು ಮನೆಮನೆಗೆ ತೆರಳಿ ಭಕ್ತರನ್ನು ಹರಸುವುದುಕಷ್ಟಸಾಧ್ಯವಾದ ಕಾರಣ,ಆಯಾ ಗ್ರಾಮ-ಪಟ್ಟಣದಲ್ಲಿಅಡ್ಡಪಲ್ಲಕ್ಕಿ ಮಹೋತ್ಸವವನ್ನುಆಚರಿಸಿಕೊಂಡು ಬರಲಾಗುತ್ತದೆ. ಹೀಗೆ ಅಡ್ಡಪಲ್ಲಕ್ಕಿಉತ್ಸವಗಳು ನೆರವೇರಿದಾಗ ಜನಸಮೂಹವುಒಂದೆಡೆ ಸೇರುವುದರಿಂದ ಸಕಲರಿಗೂಸುಲಭದ ದರ್ಶನಭಾಗ್ಯ ಲಭಿಸುತ್ತದೆಎಂಬುದು ಇದರ ಹಿಂದಿನ ಸದಾಶಯ.ತಮ್ಮ ಗುರುವನ್ನುಎತ್ತರದಲ್ಲಿ ಹೊತ್ತು ಮರೆಸಬೇಕೆಂಬಶ್ರದ್ಧೆಯಿಂದ ಭಕ್ತರು ಪೀಠಾಧೀಶ್ವರರಪಲ್ಲಕ್ಕಿಯನ್ನು ಹೊತ್ತುಕೊಳ್ಳಲುಪೈಪೋಟಿ ನಡೆಸುತ್ತಾರೆ.ಇದು ಭಕ್ತರಲ್ಲಿಪಂಚಪೀಠಗಳ ಬಗ್ಗೆ ಇರುವ ಅಪಾರಶ್ರದ್ಧೆಯನ್ನು ತೋರುತ್ತದೆ.
ವಿಶೇಷಪರಂಪರೆಯುಳ್ಳ ಪಂಚಪೀಠಾಧೀಶ್ವರರಐತಿಹಾಸಿಕ ಅಡ್ಡಪಲ್ಲಕ್ಕಿಮಹೋತ್ಸವವು ಮೇ.17ರಂದುಮಲೆನಾಡಿನ ಹೆಬ್ಬಾಗಿಲಾಗಿರುವಶಿವಮೊಗ್ಗ ಮಹಾನಗರದಲ್ಲಿಹಮ್ಮಿಕೊಳ್ಳಲಾಗಿದೆ.34 ವರ್ಷಗಳ ಹಿಂದೆಜರುಗಿದ್ದ ಈ ಮಹೋತ್ಸವವು ಇಂದಿನಪೀಳಿಗೆಗೆ ಕಲ್ಪನಾತೀತ. ಪ್ರಸ್ತುತ ಸಮಾಜದಧರ್ಮಾಸಕ್ತರಿಗೆ,ಶ್ರದ್ಧೇಯಭಕ್ತಬಂಧುಗಳಿಗೆ ಪಂಚಪೀಠಗಳಮಹಾಚಾರ್ಯರ ಆಗಮನ ಉತ್ಸಾಹದಾಯಕ. ಜನಮಾನಸದಲ್ಲಿಧರ್ಮಜಾಗೃತಿ ಉಂಟು ಮಾಡಲು,ಭಕ್ತಿಭಾವಗಳೊಂದಿಗೆಧರ್ಮಾಸಕ್ತರನ್ನು ಒಂದೆಡೆ ಕಲೆಹಾಕಲು, ನಮ್ಮೀವೀರಶೈವ-ಲಿಂಗಾಯತಧರ್ಮದ ಸಂಘಟನೆಯನ್ನು ಸಂವರ್ಧಿಸಲುಶಿವಮೊಗ್ಗ ಮಹಾನಗರದಲ್ಲಿ ಮತ್ತೊಮ್ಮೆಶ್ರೀಜಗದ್ಗುರು ಪಂಚಪೀಠಾಧೀಶ್ವರರಅಡ್ಡಪಲ್ಲಕ್ಕಿ ಮಹೋತ್ಸವವನ್ನುಅತ್ಯಂತ ವೈಭವ,ಸಡಗರ ಸಂಭ್ರಮಗಳಿಂದ,ಅದ್ದೂರಿಯಾಗಿಆಚರಿಸಲು ಯೋಜಿಸಲಾಗಿದೆ.
ಅಂದುಮಧ್ಯಾಹ್ನ 3ಗಂಟೆಗೆ ನಗರದಗಾಂಧಿ ಬಜಾರ್‌ನಲ್ಲಿರುವಶ್ರೀಬಸವೇಶ್ವರ ದೇವಸ್ಥಾನದಿಂದಆರಂಭಗೊಂಡು,ಶಿವಪ್ಪ ನಾಯಕವೃತ್ತ, ನೆಹರುರಸ್ತೆ ಮೂಲಕ ಅಲ್ಲಮಪ್ರಭು ಬಯಲಿನ(ಫ್ರೀಡಂಪಾರ್ಕ್) ಮಾನವಧರ್ಮ ಮಂಟಪದಲ್ಲಿ ಸಂಪನ್ನಗೊಳ್ಳಲಿದೆ.