ಐತಿಹಾಸಿಕ ಉತ್ಸವ ಮುಗಿದರು ಸಂಭಾವನೆ ಬಾಕಿ..?

೦೨೬ ರಲ್ಲಿ ಐತಿಹಾಸಿಕ ಚಾಲುಕ್ಯ ಉತ್ಸವದ ದೃಶ್ಯ.
೦೨೬ ರಲ್ಲಿ ಐತಿಹಾಸಿಕ ಚಾಲುಕ್ಯ ಉತ್ಸವದ ದೃಶ್ಯ.
Published on
ಸಂತೋಷ ದೇಶಪಾಂಡೆ ಬಾಗಲಕೋಟೆ:
ಮೈಸೂರು, ಹಂಪಿ, ಕಿತ್ತೂರು, ಕನಕಗಿರಿ, ಚಾಲುಕ್ಯ, ರನ್ನ, ಲಕ್ಕುಂಡಿ, ನವರಸ ಪುರ ಉತ್ಸವಗಳು ಕನ್ನಡ ಸಂಸ್ಕೃತಿ, ಭಾಷೆ ಅನಾವರಣಗೊಳಿಸುತ್ತವೆ. ಈ ಉತ್ಸವದಲ್ಲಿ ಅವಕಾಶ ಪಡೆದ ಕಲಾವಿದರಿಗೆ ಗೌರವ ಧನ ನೀಡಲಾಗಿದೆ. ಆದರೇ ದಶಕಗಳ ಬಳಿಕ ನಡೆದ ರಾಷ್ಟçಮಟ್ಟದ ಚಾಲುಕ್ಯ ಉತ್ಸವ ಕಲಾವಿದರಿಗೆ ಸಂಭಾವನೆ ಮಾತ್ರ ಬಿಡಿಗಾಸು ನೀಡಿಲ್ಲ್ಲ...!!!
ರಾಜ್ಯದಲ್ಲಿ ಎಲ್ಲ ಉತ್ಸವಕ್ಕಿಂತ ರಾಷ್ಟçಮಟ್ಟದ ಚಾಲುಕ್ಯ ಉತ್ಸವಕ್ಕೆ ತನ್ನದೆಯಾದ ಗಮ್ಯತೆ ಹೊಂದಿದೆ. ಒಂದು ದಶಕ ಕಳೆದರು ಉತ್ಸವ ಆಚರಣೆ ಮಾಡಿರಲಿಲ್ಲ. ಹಲವು ಸಾರಿ ಮುಂದೂಡಿ ಪ್ರಸಕ್ತ ವರ್ಷ ಜ.೧೯ ರಂದು ಬಾದಾಮಿ, ಜ.೨೦ ಪಟ್ಟದ ಕಲ್ಲು, ಜ.೨೧ ಐಹೊಳಿಯಲ್ಲಿ ಚಾಲುಕ್ಯ ಉತ್ಸವ ಏರ್ಪಡಿಸಲಾಗಿತ್ತು. ನಾಡದೊರೆ ಸಿಎಂ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಿದ್ದರು. ಸಚಿವರು, ಶಾಸಕರು, ಅಽಕಾರಿಗಳು ಆದಿಯಾಗಿ ಭರ್ಜರಿಯಾಗಿ ಡ್ಯಾನ್ಸ ಮಾಡಿ ಸಂಭ್ರಮಿಸಿದ್ದರು. ಉತ್ಸವ ನಡೆದು ೪ ತಿಂಗಳು ಕಳೆದರು ಕಲಾವಿದರನ್ನು ತಿರುಗಿ ನೋಡಿಲ್ಲ ಎನ್ನುವುದೇ ದುರಂತ ಸಂಗತಿ.
ಸ್ಟಾçರ್ ಕಲಾವಿದರಿಗೆ ಪೆಮೆಂಟ್:
ಚಾಲುಕ್ಯ ಉತ್ಸವ ಅದ್ದೂರಿ ಆಚರಣೆ ಸರ್ಕಾರ ಒಂದು ಕೋಟಿ ರೂ. ಅಽಕ ಹಣ ಸರ್ಕಾರ ನೀಡುವುದಾಗಿ ಭರವಸೆ ನೀಡಿತ್ತು. ಅಲ್ಲದೆ ಜಿಲ್ಲೆಯ ಉದ್ಯಮಿಗಳು, ವ್ಯಾಪಾರಸ್ಥರು ಬೆನ್ನೆಲುಬಾಗಿ ನಿಂತಿ ಆರ್ಥಿಕ ಸಹಾಯ ನೀಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಉತ್ಸವ ನಡೆದಿದೆ. ಡಾಲಿ ಧನಂಜಯ, ಅರ್ಜುನ್ಯ ಜನ್ಯ, ರಘು ದಿಕ್ಷೀತ್, ಸಂಚಿತ್ ಹೆಗಡೆ ಸೇರಿದಂತೆ ರಾಜ್ಯಮಟ್ಟದ ಕಲಾವಿದರು ಜೊತೆಗೆ ಸ್ಥಳೀಯ ಕಲಾವಿದರು ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಕಲಾವಿದರನ್ನು ಕರೆ ತರಲು ಬೆಂಗಳೂರು ಮೂಲದ ರಾಜ್ ಇವೆಂಟ್ಸಗೆ ವಹಿಸಲಾಗಿತ್ತು. ರಾಜ್ಯಮಟ್ಟದ ಕಲಾವಿದರಿಗೆ ಸಂಭಾವನೆ ಬಹುತೇಕ ತಲುಪಿದೆ. ಆದರೇ ಸ್ಥಳೀಯ ಕಲಾವಿದರು ಮಾತ್ರ ಶಾಪಕ್ಕೆ ಗುರಿಯಾಗಿದ್ದಾರೆ.
ಬಡ ಕಲಾವಿದರ ಬಗ್ಗೆ ಕಾಳಜಿ ಏಕಿಲ್ಲ ?
ಚಾಲುಕ್ಯ ಉತ್ಸವಕ್ಕೆ ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ, ನಂದಿ ಧ್ವಜ, ಹಕ್ಕಿ-ಪಿಕ್ಕಿ ಕುಣಿತ, ಪೂಜಾರ ಕುಣಿತ, ಕೌಂಸಾಳಿ, ಪುರವಂತಿಕೆ, ಸುಗಮ ಸಂಗೀತ, ವಚನ ಗಾಯನ, ಹಂತಿ ಪದ, ಲಘು ಸಂಗೀತ, ಭರತ ನಾಟ್ಯ, ಜನ ಪದ ನೃತ್ಯ, ಜನಪದ ಸಂಗೀತ, ತೊಗಲು ಗೊಂಬೆ ಆಟ, ದೊಡ್ಡಾಟ ನೃತ್ಯ, ವಾದನ ಸಂಗೀತಗಾರರು ಸೇವೆ ಸಲ್ಲಿಸಿದರು ಅವರಿಗೆ ಈ ವರೆಗೆ ಬಿಡಿಗಾಸು ಸಿಕ್ಕಿಲ್ಲ. ನಿತ್ಯವು ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಬಾಗಲಕೋಟೆ ಉಪ ವಿಭಾಗಾಽ ಕಚೇರಿ ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. ಯಾವೊಬ್ಬ ಅಽಕಾರಿಗಳು ಕಾಳಜಿ ವಹಿಸುತ್ತಿಲ್ಲ. ಸಬೂಬು ಹೇಳುತ್ತಲೆ ಕಾಲ ಹರಣ ಮಾಡುತ್ತಿದ್ದಾರೆ.
ಅಽಕಾರಿಗಳ ಚಲ್ಲಾಟ ಕಲಾವಿದರಿಗೆ ಪ್ರಾಣ ಸಂಕಟ.
ಜಿಲ್ಲಾಽಕಾರಿ ಸಂಗಪ್ಪ ಎಂ, ಉಪ ವಿಭಾಗಾಽಕಾರಿ ಸಂತೋಷ ಜಗಲಾಸರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ ಸ್ಥಳೀಯ ಕಲಾವಿದರು ಯಾತನೆ ಕಂಡರು ಸಹ ಕಿಂಚಿತ್ತು ಕಾಳಜಿ ಇಲ್ಲ. ನೊರೆಂಟು ನೆಪ ಹೇಳುತ್ತಲೆ ದಿನ ಕಳೆಯುತ್ತಿದ್ದಾರೆ. ಅಂದಾಜು ೧೫೦ ಕ್ಕೂ ಹೆಚ್ಚು ಕಲಾವಿದರು ದಿಕ್ಕು ತೋಚದಂತಾಗಿದೆ. ಬಿಸಿಲಿನ ತಾಪದ ನಡುವೇ ತಮ್ಮೂರಿನಿಂದ ಸರ್ಕಾರಿ ಕಚೇರಿಗೆ ಸ್ವಂತ ಹಣದಿಂದ ಬಂದರು ಬರಿಗೈಯಲ್ಲಿ ವಾಪಸ್ ಆಗುತ್ತಿದ್ದಾರೆ. ವಾಸ್ಥವ ಸಮಸ್ಯೆಯಾದರು ಏನು ಎನ್ನುವುದು ಕೂಡಾ ಬಿಚ್ಚಿಡುತ್ತಿಲ್ಲ. ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದರೇ ಮುಂದಿನ ಸಾರಿ ಅವಕಾಶ ನೀಡಲ್ಲ ಅಂತ ಬೆದರಿಕೆ ಹಾಕುವ ಸನ್ನಿವೇಶ ಸೃಷ್ಟಿ ಮಾಡಲಾಗುತ್ತಿದೆ. ಅಽಕಾರಿಗಳಿಗೆ ಚಲ್ಲಾಟ, ಕಲಾವಿದರಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.
ಉತ್ಸವ ನಡೆದು ನಾಲ್ಕು ತಿಂಗಳು ಗತಿಸುತ್ತಾ ಬಂದರು ಕಲಾವಿದರಿಗೆ ವೇತನ ನೀಡಿಲ್ಲ. ದೊಡ್ಡ ಕಲಾವಿದರಿಗೆ ಉತ್ಸವ ದಿನದಂದು ಚಕ್ ವಿತರಣೆ ಮಾಡಲಾಗಿದೆ. ಕೈಯಿಂದ ಹಣ ಖುರ್ಚು ಮಾಡಿಕೊಂಡು ಕಲಾ ರಸದೌತನ ಉಣಬಡಿಸಿ ನಾಡಿನ ಸಂಸ್ಕೃತಿಯ ಅಸ್ಮಿತೆಯ ಕಾಪಾಡುವ ಸ್ಥಳೀಯ ಕಲಾವಿದರ ಬಗ್ಗೆ ನಿರ್ಲಕ್ಷ÷್ಯ ಧೋರಣೆ ಏಕೆ ಎನ್ನುವುದು ಯತ್ನ ಪ್ರಶ್ನೆಯಾಗಿದೆ. ಕುಣಿದು ಕುಪ್ಪಳಿಸಿದ ಶಾಸಕರು, ಸಚಿವರು ಈ ಬಗ್ಗೆ ತಿರುಗಿ ನೋಡಿಲ್ಲ. ಹೀಗೆ ಮುಂದು ವರೆದರೇ ಕಲಾವಿದರು ಧರಣಿ ನಡೆಸುವುದಾಗಿ ವಿಜಯವಾಣಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net