ಪೂರ್ವಿಕರಿಂದ ಹಿಂದೂ ಧರ್ಮ ಉಳಿವು

ತಾಳಿಕೋಟೆ ತಾಲೂಕಿನ ಬಿ.ಸಾಲವಾಡಗಿ ಗ್ರಾಮದಲ್ಲಿ ಆಯೋಜಿಸಲಾದ ಶ್ರೀರಾಮನವಮಿ ಉತ್ಸವ ಹಿಂದೂ ಸಮಾವೇಶವನ್ನು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಉದ್ಘಾಟಿಸಿದರು. ಶ್ರೀಅಡವಿಲಿಂಗ ಮಹಾರಾಜರು, ಬಿ.ಎಸ್. ಪಾಟೀಲ, ಬಸನಗೌಡ ಯಡಿಯಾಪೂರ ಮತ್ತಿತರರಿದ್ದರು.
ತಾಳಿಕೋಟೆ ತಾಲೂಕಿನ ಬಿ.ಸಾಲವಾಡಗಿ ಗ್ರಾಮದಲ್ಲಿ ಆಯೋಜಿಸಲಾದ ಶ್ರೀರಾಮನವಮಿ ಉತ್ಸವ ಹಿಂದೂ ಸಮಾವೇಶವನ್ನು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಉದ್ಘಾಟಿಸಿದರು. ಶ್ರೀಅಡವಿಲಿಂಗ ಮಹಾರಾಜರು, ಬಿ.ಎಸ್. ಪಾಟೀಲ, ಬಸನಗೌಡ ಯಡಿಯಾಪೂರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾರಿಕಾ ಮಂಜುನಾಥ ಹೇಳಿಕೆ
  • ಶ್ರೀರಾಮನವಮಿ ಉತ್ಸವ
ತಾಳಿಕೋಟೆ: ಹಿಂದೂ ಧರ್ಮ ನಾಶ ಮಾಡಲು ಸಾಕಷ್ಟು ಬಾರಿ ದೇಶದ ಮೇಲೆ ದಾಳಿ ಮಾಡಿದ್ದರೂ, ಸನಾತನ ಹಿಂದೂ ಧರ್ಮ ಜೀವಂತವಾಗಿರಲು ನಮ್ಮ ಪೂರ್ವಿಕರು ಕಾಪಾಡಿಕೊಂಡು ಬಂದಿರುವ ಧರ್ಮ ಪರಂಪರೆಯೇ ಕಾರಣ ಎಂದು ಹಾರಿಕಾ ಮಂಜುನಾಥ ಹೇಳಿದರು.
ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ 4ನೇ ವರ್ಷದ ಶ್ರೀರಾಮನವಮಿ ಉತ್ಸವ, ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದೂಗಳಿಗೆ ಇರುವುದು ಭಾರತ ದೇಶ ಒಂದೇ. ಇಂದು ದೇಶದಲ್ಲಿ ನೂರು ಕೋಟಿ ಹಿಂದೂಗಳು ಧರ್ಮಾಚರಣೆ ಮಾಡುತ್ತಿದ್ದಾರೆ. ಶ್ರೀರಾಮನನ್ನು ಜಪಿಸುವುದರೊಂದಿಗೆ ಧರ್ಮ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವುದು ಹಿಂದೂ ಧರ್ಮದ ತಾಕತ್ತು ಎಂದರು. ಹಳ್ಳಿ ಹಳ್ಳಿಗಳಲ್ಲಿ ರಾಮನ ಉತ್ಸವ ನಡೆಯುತ್ತಿದೆ. ನಮ್ಮ ಪೂರ್ವಜರು ಕಟ್ಟಿದ ದೇವಸ್ಥಾನಗಳ ಮೇಲೆ ಎಷ್ಟೇ ಬಾರಿ ದಾಳಿ ಮಾಡಿ ಧ್ವಂಸ ಮಾಡಿದರೂ ಮತ್ತೇ ತಲೆ ಎತ್ತಿ ನಿಂತಿವೆ. ಅಯೋಧ್ಯೆಯ ರಾಮ ಮಂದಿರದ ಮೇಲೆ 500 ವರ್ಷಗಳಿಂದ ಸತತವಾಗಿ ದಾಳಿಯಿಂದ ಧ್ವಂಸವಾದರೂ ಮತ್ತೆ ರಾಮ ಮಂದಿರವನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆದಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿ ಗುಂಡಕನಾಳ ಬೃಹನ್ ಮಠದ ಶ್ರೀ ಗುರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸನಾತನ ಹಿಂದೂ ಧರ್ಮ ಎಂದಿಗೂ ಅಳಿಸಲಾಗದಂತಹ ಧರ್ಮ. ಸಾವಿರಾರು ವರ್ಷಗಳಿಂದಲೂ ಈ ಧರ್ಮ ನಾಶ ಮಾಡಲು ಬಂದವರು ನಾಶವಾಗಿ ಹೋಗಿದ್ದಾರೆ ಎಂದರು.
ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಮಾತನಾಡಿ, ಶ್ರೀರಾಮನು ಮರ್ಯಾದೆ ಪುರುಷೋತ್ತಮನಾಗಿದ್ದ, ಅವರನ್ನು ಪೂಜಿಸಿ ಅವರ ಆದರ್ಶಗಳನ್ನು ಮಕ್ಕಳಲ್ಲಿ ತುಂಬುವಂತಹ ಕಾರ್ಯ ಪಾಲಕರು ಮಾಡಬೇಕಿದೆ ಎಂದರು.
ಶ್ರೀ ಅಡವಿಲಿಂಗ ಮಹಾರಾಜರು, ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ, ಬಿಜೆಪಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ, ಬಸನಗೌಡ ಯಡಿಯಾಪೂರ, ಶ್ರೀಕಾಂತ ಪತ್ತಾರ ಮಾತನಾಡಿದರು.
ಸಣ್ಣಕ್ಕೆಪ್ಪ ಮುತ್ಯಾ ಪೂಜಾರ, ಮಹಾರಾಯ ಮುತ್ಯಾ ಪೂಜಾರಿ, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಬಸನಗೌಡ ಚೋಕ್ಕಾವಿ, ಬಿ.ಎಸ್. ಪಾಟೀಲ, ಅಪ್ಪಾಸಾಹೇಬಗೌಡ ಮೂಲಿಮನಿ, ಉತ್ಸವ ಸಮಿತಿಯ ರಾಜುಗೌಡ ಕೊಳೂರ, ಕುಮಾರ ಹೂಗಾರ, ಮದುರಾಜ ನೂಲ, ಮನೋಜ ಹೊರಗಿನಮನಿ, ಭೀಮನಗೌಡ ಅನಂತರಡ್ಡಿ, ಸಂತೋಷ ಹೊಳೆಪ್ಪಗೋಳ, ವಿಶ್ವನಾಥ ಅನಂತರಡ್ಡಿ, ರಾಜು ರಾರಡ್ಡಿ, ಚಂದ್ರು ಮೂಲಿಮನಿ, ರಮೇಶ ತಾರನಾಳ, ಆಕಾಶ ಅನಂತರಡ್ಡಿ ಮತ್ತಿತರರಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ಕೈಗೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net