ಶ್ರೀನಿವಾಸಪುರ: ಗುರು&ಹಿರಿಯರನ್ನು ಗೌರವಿಸುವುದು ಭಾರತದ ಶ್ರೀಮಂತ ಸಂಸತಿ ತೋರಿಸುತ್ತದೆ, ನಮ್ಮ ಹಿಂದೂ ಧರ್ಮದ ಸಂಸತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ನಿವೃತ್ತ ಶಿಕ ಹಸೇನ್ ತಿಳಿಸಿದರು. world
ತಾಲೂಕಿನ ಯಲ್ದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1991& 92ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಮಾಜದಲ್ಲಿ ಗುರು ಪರಂಪರೆಗೆ ಉನ್ನತ ಸ್ಥಾನವಿದೆ. ಈ ದೇಶದ ಉನ್ನತ ನಾಗರಿಕರನ್ನಾಗಿ ರೂಪಿಸುವ ಶಕ್ತಿ ಶಿಕರಿಗಿದೆ. "ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ' ಎನ್ನುವ ಮಾತಿನಂತೆ ದೇಶದ ಅಭಿವೃದ್ಧಿಯಲ್ಲಿ ಶಿಕರ ಪಾತ್ರ ಮುಖ್ಯವಾದದ್ದು ಎಂದು ಹೇಳಿದರು.
ನಿವೃತ್ತ ಶಿಕ ಟಿ.ಎಂ. ರಾಮಕೃಷ್ಣೇಗೌಡ ಮಾತನಾಡಿ, ಶಿಕರು ಮಕ್ಕಳಿಗೆ ಉತ್ತಮ ಶಿಣ ನೀಡಿದರೆ ಅವರು ಮುಂದೆ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗುತ್ತಾರೆ. ಅವರಲ್ಲಿ ಶಿಣದ ಜತೆಗೆ ಉತ್ತಮ ಮಾನವೀಯ ಮೌಲ್ಯ ಬೆಳಸಬೇಕು. ಸರ್ಕಾರದಿಂದ ಮಕ್ಕಳ ಕಲಿಕೆಗೆ ಎಲ್ಲ ರೀತಿಯ ಸೌಲಭ್ಯ ದೊರೆಯುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿ ಸರ್ಕಾರದ ವಿವಿಧ ಯೋಜನೆ ಬಳಸಿಕೊಳ್ಳಬೇಕು ಎಂದರು.
1991 92ನೇ ಸಾಲಿನ ವಿದ್ಯಾರ್ಥಿಗಳಿಂದ ಶಾಲೆಗೆ 10 ಕುರ್ಚಿಗಳನ್ನು ಕೊಡುಗೆ ನೀಡಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ಎಲ್.ಮುರಳಿ ಮೋಹನ್, ಅನಿಲ್ಕುಮಾರ್, ರಾಜನಾರಾಯಣ, ಮುನಿರಾಜು, ಆರ್.ಅಮರೇಶ್, ಸಹ ಶಿಕರಾದ ಡಿ.ವೆಂಕಟರತ್ನ, ಭವ್ಯಶ್ರೀ, ಸಮಾಜ ಸೇವಕ ಬಿ.ಎಸ್. ವಾಸುದೇವಮೂರ್ತಿ, ಬಿಸಿಯೂಟ ಸಿಬ್ಬಂದಿ ವಿಜಯಮ್ಮ, ಪುಷ್ಪಮ್ಮ, ಚೌಡಮ್ಮ ಇದ್ದರು.