25ರಂದು ನೆಲಮಂಗಲದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ / NELAMANGAL

ನೆಲಮಂಗಲ ಬಸವಣ್ಣ ದೇವರ ಮಠದ ಆವರಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯ ಕರಪತ್ರವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಾ.ರಮೇಶ್​, ಉಪಾಧ್ಯಕ್ಷ ಎಚ್​.ಜಿ.ರಾಜು, ಸತೀಶ್​, ಸೀತರಾಮ್​, ಕೆ.ಪಿ.ಬೃಂಗೇಶ್​, ಸುಬ್ರಮಣಿ ಇದ್ದರು.
ನೆಲಮಂಗಲ ಬಸವಣ್ಣ ದೇವರ ಮಠದ ಆವರಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯ ಕರಪತ್ರವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಾ.ರಮೇಶ್​, ಉಪಾಧ್ಯಕ್ಷ ಎಚ್​.ಜಿ.ರಾಜು, ಸತೀಶ್​, ಸೀತರಾಮ್​, ಕೆ.ಪಿ.ಬೃಂಗೇಶ್​, ಸುಬ್ರಮಣಿ ಇದ್ದರು.
Published on
ನೆಲಮಂಗಲ : ಸ್ವಾತಂತ್ರ$್ಯ ಪೂರ್ವದಲ್ಲಿ ಭಾರತೀಯರನ್ನು ಒಗ್ಗೂಡಿಸಲು ಆರಂಭವಾದ ಗಣೇಶ ಹಬ್ಬ ಇಂದು ಮನೆಮನೆಗಳಲ್ಲಿ ಆಚರಣೆ ಆಗುತ್ತಿದ್ದು, ವೈಭವ ಹೆಚ್ಚಿಸಲು ಹಿಂದೂ ಮಹಾಗಣಪತಿ ವೇದಿಕೆಯಾಗಿದೆ. ಎಲ್ಲರೂ ಕೈಜೋಡಿ ಯಶಸ್ವಿಗೊಳಿಸಬೇಕು ಎಂದು ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗ ದಳದಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಸ್ವಾತಂತ್ರ$್ಯ ಹೋರಾಟಗಾರ ಬಾಲಗಂಗಾಧರ ತಿಲಕ್​ ಅವರು ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗಣೇಶೋತ್ಸವನ್ನು ಜಾರಿಗೊಳಿಸಿದ್ದು, ಇಂದಿಗೂ ಆಚರಣೆಯಲ್ಲಿದೆ. ವ್ನಿನಿವಾರಕ ಗಣಪತಿ ಎಂದರೇ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅದ್ದರಲ್ಲೂ ಮಕ್ಕಳು ಹಾಗೂ ಯುವಕರು ಅತಿಹೆಚ್ಚು ಪೂಜಿಸುವ ದೇವರು. ನಮ್ಮ ಸಂಸ್ಕಾರ, ಸಂಸತಿಯನ್ನು ಗಣೇಶನ ಮೂಲಕ ಮಕ್ಕಳ ಮನಸ್ಸಿನಲ್ಲಿ ಮೂಡಿಸಲು ಗಣೇಶೋತ್ಸವ ಪ್ರಮುಖ ಹಬ್ಬ. ನಾನಾ ಸಂಟನೆಗಳು ಒಟ್ಟು ಗೂಡಿ ಹಿಂದೂ ಮಹಾಗಣಪತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಚಾರ. ನಗರದಲ್ಲೂ ನಮ್ಮದೇ ಮಠದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ವಂದೇ ಮಾತರಂ ಗೀತಗಾಯನ : ವಂದೇ ಮಾತರಂ ಗೀತೆ ರಚನೆ ಮಾಡಿ ನೂರು ವರ್ಷಗಳೂ ಪೂರೈಕೆ ಮಾಡಿದ್ದು ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಪ್ರಯುಕ್ತ ಎಲ್ಲ ಶಾಲಾ&ಕಾಲೇಜಿನಲ್ಲಿ ವಂದೇ ಮಾತರಂ ಗೀತಗಾಯನ ಹಮ್ಮಿಕೊಳ್ಳಬೇಕು. ವಿಜೇತರಿಗೆ ಶ್ರೀಮಠದಿಂದ ಬಹುಮಾನ ನೀಡುವುದಾಗಿ ಸಿದ್ದಲಿಂಗಶ್ರೀ ತಿಳಿಸಿದರು.
ಹಿಂದೂ ಮಹಾಗಣಪತಿ ಉತ್ಸವ ಆಯೋಜಕ ಎಂ.ಎನ್​.ರಾಮ್​ ಮಾತನಾಡಿ, ಹಿಂದೂ ಸಮಾಜದ ಜಾಗೃತಿ ಹಾಗೂ ಒಳಿತಿಗಾಗಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಸೆ.25ರಂದು ನಗರದ ಬಸವಣ್ಣ ದೇವರ ಮಠದಲ್ಲಿ ಪ್ರತಿಷ್ಠಾಪಿಸಿ 3ದಿನ ಸಾಂಸತಿಕ ಕಾರ್ಯಕ್ರಮ, ಧರ್ಮ ಜಾತಿ ಕಾರ್ಯಕ್ರಮ ಸೇರಿದಂತೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಾ.ರಮೇಶ್​, ಉಪಾಧ್ಯಕ್ಷ ಎಚ್​.ಜಿ.ರಾಜು, ಸತೀಶ್​, ಸೀತರಾಮ್​, ಕೆ.ಪಿ.ಬೃಂಗೇಶ್​, ಸುಬ್ರಮಣಿ, ಕಾರ್ಯದರ್ಶಿ ಮೋಹನ್​, ಯಶವಂತ್​, ಮಹಿಳಾ ಸಮಿತಿಯ ಮಂಜುಳಾ ಸುರೇಶ್​, ರಾಜಮ್ಮ ಪ್ರಕಾಶ್​, ಸೌಮ್ಯಾ, ವೇದಾವತಿ, ಲೀಲಾಕುಮಾರ್​, ಮಂಗಳಮ್ಮ, ಶೀಲಾ, ಸುಮ, ಮಂಜುಳಾ, ಶೈಲಜಾ, ಸಮಿತಿಯ ಬೈರಣ್ಣ, ಜಯಂತ್​, ನಯನ್​, ಬಾಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net