ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ
ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
  • ಹಿಂದೂ ಜನಜಾಗೃತಿ ಸಮಿತಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ದೂರು
  • ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಭಗವಾನ್

ಬೆಂಗಳೂರು:ಹಿಂದೂ ಧರ್ಮದಆರಾಧ್ಯ ದೈವವಾಗಿರುವ ಶ್ರೀರಾಮ,ಶ್ರೀಕೃಷ್ಣ,ಭಗವದ್ಗೀತೆಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳಕುರಿತು ಅವಹೇಳನಕಾರಿ ಮತ್ತುಪ್ರಚೋದನಕಾರಿ ಹೇಳಿಕೆಗಳನ್ನುನೀಡಿರುವ ಪ್ರೊ.ಕೆ.ಎಸ್.ಭಗವಾನ್ ಅವರವಿರುದ್ಧ ಸೂಕ್ತ ಕಾನೂನು ಕ್ರಮಜರುಗಿಸುವಂತೆ ಆಗ್ರಹಿಸಿ ಹಿಂದೂಜನಜಾಗೃತಿ ಸಮಿತಿ (ಹಿಂಜಸ)ಪೊಲೀಸ್ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದೆ.

ಜೂ.9ರಂದು ದಾವಣಗೆರೆಜಿಲ್ಲೆಯ ಹರಿಹರದಲ್ಲಿರುವ ಬಿ.ಕೃಷ್ಣಪ್ಪಮೈತ್ರಿವನದಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ ಭಗವಾನ್ಶ್ರೀರಾಮ ಹಾಗೂ ಹಿಂದೂ ಧಾರ್ಮಿಕಪರಂಪರೆಗಳ ಕುರಿತು ಅವಹೇಳನಕಾರಿಮತ್ತು ವಿವಾದಾತ್ಮಕ ಹೇಳಿಕೆಗಳನ್ನುನೀಡಿರುವುದು ಕೋಟ್ಯಂತರ ಹಿಂದೂಗಳಧಾರ್ಮಿಕ ಭಾವನೆಗಳಿಗೆಧಕ್ಕೆಯನ್ನುಂಟುಮಾಡಿದೆ ಎಂದುಸಮಿತಿಯು ದೂರಿನಲ್ಲಿ ತಿಳಿಸಿದೆ.

ದೂರಿನೊಂದಿಗೆಭಗವಾನ್ ಭಾಷಣದ ವಿಡಿಯೋ,ಧ್ವನಿಮುದ್ರಣಹಾಗೂ ಇತರೆ ಸಾಕ್ಷ್ಯಗಳನ್ನುಸಲ್ಲಿಸಿದ್ದು,ಪರಿಶೀಲಿಸಿನಿಷ್ಪಕ್ಷಪಾತ ತನಿಖೆ ನಡೆಸುವಂತೆಮನವಿ ಮಾಡಲಾಗಿದೆ.

ಪ್ರೊ.ಕೆ.ಎಸ್.ಭಗವಾನ್ ಈ ಹಿಂದೆಯೂ ಅನೇಕ ಬಾರಿ ಹಿಂದೂ ದೇವತೆಗಳು, ಧರ್ಮಗ್ರಂಥಗಳು ಹಾಗೂ ಹಿಂದೂ ನಂಬಿಕೆಗಳ ಕುರಿತು ಅವಮಾನಕಾರಿಯಾಗಿ ಮಾತನಾಡಿದ್ದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆದಾಗ್ಯೂ ಅವರು ಪುನಃ ಪುನಃ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಉದ್ದೇಶಪೂರ್ವಕವಾಗಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ವೈಮನಸ್ಸು ಸೃಷ್ಟಿಸುವ ಸಾಧ್ಯತೆಯಿದೆ.

— ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ ವಕ್ತಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net