ಮುದಗಲ್: ಸನಾತನ ಹಿಂದೂ ಧರ್ಮದ ಸಂರಕ್ಷಣೆ ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಹುರಿದುಂಬಿಸುವ ನಿಟ್ಟಿನಲ್ಲಿ ಜ.24ರಂದು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಗುರುರಾಜ ದೇಶಪಾಂಡೆ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುತ್ವದ ಸಂರಕ್ಷಣೆ ಮತ್ತು ಸನಾತನ ಉಳಿವಿಗಾಗಿ ಮನೆ ಮನೆಗಳಲ್ಲಿ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಸದುದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರು, ಸಿದ್ದಯ್ಯಸ್ವಾಮಿ ಸಾಲಿಮಠ, ವಿಶೇಷ ಉಪನ್ಯಾಸಕರಾಗಿ ಟಿ. ಪ್ರಸನ್ನ ಕುಮಾರ್ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಮಲ್ಲಪ್ಪ ಮಾಟೂರು, ಗುಂಡಪ್ಪ ಗಂಗಾವತಿ, ಮಹಾಂತೇಶ ಅಕ್ಷತಿ, ರವಿಕುಮಾರ್ ಕಟ್ಟಿಮನಿ ಇದ್ದರು.