ಮುಳಬಾಗಿಲಿನಿಂದ ತಿರುಪತಿ ತಿರುಮಲ 21ನೇ ವರ್ಷದ ಪಾದಯಾತ್ರೆ Temple
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಖ್ಯಶಿಕ್ಷಕ ಕೆ.ಎನ್.ಗೋವಿಂದೇಗೌಡ ಅನಿಸಿಕೆ
ಮುಳಬಾಗಿಲು: ದೂರದ ಧಾರ್ಮಿಕ ಕ್ಷೇತ್ರ ಮತ್ತು ತೀರ್ಥ ಯಾತ್ರೆಗಳಿಗೆ Temple ಕಾಲ್ನಡಿಗೆ ಮೂಲಕ ನಡೆದುಕೊಂಡು ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಕಷ್ಟಗಳು ಹೋಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ನಮ್ಮ ಪೂರ್ವಿಕರು ಪಾದಯಾತ್ರೆ ಮಾಡುತ್ತಿದ್ದರು ಎಂಬುದರ ಹಿಂದೆ ವೈಜ್ಞಾನಿಕ ತಳಹದಿಯು ಇತ್ತು ಎಂದು ಮುಖ್ಯಶಿಕ್ಷಕ ಕೆ.ಎನ್.ಗೋವಿಂದೇಗೌಡ ತಿಳಿಸಿದರು.
ಮುಳಬಾಗಿಲಿನಿಂದ ತಿರುಪತಿ ತಿರುಮಲಕ್ಕೆ 21ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಪಾದಯಾತ್ರೆಯಿಂದ ಮನುಷ್ಯನ ದೇಹವು ಸಂಪೂರ್ಣ ಪುನಶ್ಚೇತನಗೊಂಡು ಆರೋಗ್ಯವಂತ ಜೀವನ ಸಾಗಿಸಬಹುದು ಎಂದರು.
ಈ ಹಿಂದೆ ನಮ್ಮ ಪೂರ್ವಕರು ದೂರದ ದೇವಾಲಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದರು, ಆಗ ಅವರ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಚಿಂತನೆಗಳು ಸಹ ಆರೋಗ್ಯಕರವಾಗಿದ್ದವು ಎಂದು ತಿಳಿಸಿದರು.
ಜೀವನ ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ. ಇದರಲ್ಲಿ ದೇವರು, ದೇವಾಲಯ, ಜನರ ಸೇವೆಯು ಸಹ ಒಳಗೊಂಡಿರುತ್ತದೆ. ಹಾಗಾಗಿ ಧಾರ್ಮಿಕ ವಲಯವು ಸಹ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ನಾರಾಯಣಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ಅಪ್ಪಾಜಿಗೌಡ, ರಾಮಸ್ವಾಮಿ, ಮುಖ್ಯ ಶಿಕ್ಷಕ ವೆಂಕಟೇಶ್, ಶಿಕ್ಷಕರಾದ ಮಂಜುನಾಥ್, ವೆಂಕಟರಾಮ್, ಸುಬ್ರಹ್ಮಣಿ, ನಟರಾಜ್, ಶಂಕರಾಚಾರ್ಯ, ರಮೇಶ್, ಆನಂದ್, ಮುರುಳಿ, ರವೀಂದ್ರ ಸೇರಿ ಸುಮಾರು 65ಮಂದಿ ಪಾದಯಾತ್ರೆಯಲ್ಲಿ ಪ್ರಯಾಣ ಬೆಳೆಸಿದರು.