_1778846250618.webp?w=480&auto=format%2Ccompress&fit=max)
_1778846250618.webp?w=480&auto=format%2Ccompress&fit=max)
ಸಾಮಾಜಿಕ ನ್ಯಾಯದ ಭಾಗ
ಜೀವನಾಂಶವು ಸಾಮಾಜಿಕ ನ್ಯಾಯದ ಭಾಗವಾಗಿದೆ. ಈ ಆದೇಶಗಳನ್ನು ಗಾಳಿಗೆ ತೂರುವ ಪ್ರವೃತ್ತಿಗಳಿಗೆ ಅನುಮತಿ ನೀಡಿದರೆ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬಂಧನ ವಾರಂಟ್ ಎತ್ತಿಹಿಡಿದಿದೆ. ಪತಿಯು ಮಗನ ಶಿಕ್ಷಣಕ್ಕಾಗಿ ವಾರ್ಷಿಕ ಸುಮಾರು 12 ಲಕ್ಷ ರೂ. ಪಾವತಿಸುತ್ತಿರುವುದು ಮತ್ತು ವಿದೇಶಿ ಪ್ರವಾಸಗಳಂತಹ ಐಷಾರಾಮಿ ಜೀವನ ನಡೆಸುತ್ತಿರುವುದಕ್ಕೆ ಪುರಾವೆಗಳಿವೆ. ಹಾಗಾಗಿ ಅವರ ಆರ್ಥಿಕ ಸಂಕಷ್ಟದ ವಾದವನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ವಾರಂಟ್ ಹೊರಡಿಸಿರುವುದು ಸರಿಯಾಗಿಯೇ ಇದೆ ಎಂದು ಹೇಳಿದೆ.