

ಪ್ರಮುಖ ಮುಖ್ಯಾಂಶಗಳು
ಡಿಜಿಟಲ್ ವೇದಿಕೆಗಳಿಗೂ ಅನ್ವಯ
ಸರ್ಕಾರಿ ವೆಬ್ಸೈಟ್ಗಳು, ಆ್ಯಪ್ಗಳು ಮತ್ತು ಪೋರ್ಟಲ್ಗಳು ಅಂಗವಿಕಲರಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿರಬೇಕು. ಡಿಜಿಟಲ್ ಆಡಿಟ್ ಪ್ರಮಾಣಪತ್ರವಿಲ್ಲದೆ ಯಾವುದೇ ಸರ್ಕಾರಿ ತಂತ್ರಾಂಶಗಳನ್ನು ಬಿಡುಗಡೆ ಮಾಡಬಾರದು.
ಶಿಕ್ಷಕಿ ಮರುನೇಮಕಕ್ಕೆ ಆದೇಶ
ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು 2013ರ ಆ.22ರಂದು ಶಾಲೆಯ ಕಿಟಕಿಯಿಂದ ಜಿಗಿಯಲು ಮುಂದಾಗಿದ್ದ ವಿದ್ಯಾರ್ಥಿನಿಯನ್ನು ರಸಲು ಪ್ರಯತ್ನಿಸಿದ ವೇಳೆ ಕಟ್ಟಡದಿಂದ ಕೆಳಗೆ ಬಿದ್ದು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅವರ ವೈದ್ಯಕಿಯ ಚಿಕಿತ್ಸೆಗೆ ಲಾಂತರ ರೂಪಾಯಿ ರ್ಖಚಾಗಿತ್ತು. ಶಾಲೆಯೂ ಆರಂಭಿಕ ಹಂತದಲ್ಲಿ ಶಿಕ್ಷಕಿಗೆ ನೆರವು ನೀಡಿದ್ದರೂ, 2015ರ ಮೇ 31ರಂದು ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ರಾಜ್ಯ ಅಂಗವಿಕಲರ ಹಕ್ಕುಗಳ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯುಕ್ತರು ಶಿಕ್ಷಕಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿದ್ದ ಶಾಲೆಯ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ ಸೂಕ್ತ ಸೌಲಭ್ಯಗಳೊಂದಿಗೆ ಮರುನೇಮಕಕ್ಕೆ ಅವಕಾಶ ಕಲ್ಪಿಸುವಂತೆ ಆದೇಶಿಸಿದೆ.