ಮ್ಯಾಜಿಸ್ಟ್ರೆಟ್ ಎದುರು ದಾಖಲಿಸಲಾದ ಸಂತ್ರಸ್ತೆಯ ಹೇಳಿಕೆ ಪ್ರಕಾರ, ತಾನು ಮಂಜುನಾಥನನ್ನು ಪ್ರೀತಿಸುತ್ತಿದ್ದು, 2025ರ ಏಪ್ರಿಲ್ನಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಳು. ನಂತರ ವಿಜಯಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿಗಳಾಗಿ ವಾಸಿಸುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಆರೋಪಿಯು ತನ್ನನ್ನು ಸಂಶಯಿಸಿ, ಕೆಲಸಕ್ಕೆ ಹೋಗುವಾಗ ಮನೆಯೊಳಗೆ ಲಾಕ್ ಮಾಡುತ್ತಿದ್ದನೆಂದು, ಈ ಬಗ್ಗೆ ತಾನು ಮನೆ ಮಾಲೀಕನಿಗೆ ತಿಳಿಸಿದ ನಂತರ ಪೋಷಕರು ಬಂದು ತನ್ನನ್ನು ಕರೆದೊಯ್ದರು ಎಂದು ಆರೋಪಿಸಿದ್ದಳು. ಆದರೆ, ಈ ಹೇಳಿಕೆಯನ್ನು ಮನೆ ಮಾಲೀಕ ಕೋರ್ಟ್ನಲ್ಲಿ ನಿರಾಕರಿಸಿದ್ದಾನೆ. ಈ ಅಂಶಗಳನ್ನು ಜಾಮೀನು ನೀಡುವ ವೇಳೆ ನ್ಯಾಯಪೀಠ ಪರಿಗಣಿಸಿದೆ.