ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದರೆ ಸಾಲ ವಸೂಲಾತಿಗೆ ತೊಂದರೆಯಾಗುತ್ತದೆ ಎಂಬ ಫೈನಾನ್ಸ್ನ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಕದ್ದ ಮಾಲು ಎಂದು ಶಂಕಿಸಲಾದ ಚಿನ್ನವನ್ನು ಪೊಲೀಸರ ಮುಂದೆ ಹಾಜರುಪಡಿಸದೇ ಇದ್ದರೆ ಅದು ತನಿಖೆಗೆ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ ತನ್ನ ಬಳಿ ಇರುವ ವಿವಾದಿತ ಚಿನ್ನವನ್ನು ಪೊಲೀಸರ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದು, ಅವುಗಳು ಕಳ್ಳತನದ ಮಾಲುಗಳು ಎಂದು ಸಾಬೀತಾದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ಆದೇಶಿಸಿದೆ.