2021ರ ನ.21ರಂದು ವಾಮಂಜೂರಿನ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಸಿಹಿತಿಂಡಿಯ ಆಮಿಷವೊಡ್ಡಿದ ಅಪರಾಧಿಗಳು ಆಕೆಯನ್ನು ಅಲ್ಲಿನ ಕೋಣೆಯೊಂದಕ್ಕೆ ಕರೆದೊಯ್ದಿದ್ದರು. ಬಾಲಕಿಯ ಪಾಲಕರು ಮತ್ತು ಅಪರಾಧಿಗಳು ಅದೇ ಫ್ಯಾಕ್ಟರಿಯಲ್ಲಿ ಕೆಲಸಗಾರರಾಗಿದ್ದು, ಆಕೆಯ ಮೇಲೆ ಮೂವರೂ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪ್ರಕರಣದ 4ನೇ ಆರೋಪಿ ಸೀತಾ ರಂತು ಲೋಹರ್ ಸಿರಂಗೆದ ಎಂಬಾತ ಕೋಣೆಯ ಹೊರಗೆ ನಿಂತಿದ್ದು, ಯಾರಾದರೂ ಬರುತ್ತಾರೆಯೇ ಎಂದು ನೋಡಲು ಕಾವಲು ಕಾಯುತ್ತಿದ್ದ. ಪೈಶಾಚಿಕವಾಗಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾರಣ ಬಾಲಕಿ ನೋವಿನಿಂದ ಕಿರುಚಿದ್ದಾಳೆ. ಆಗ ಅಪರಾಧಿಗಳು ಆಕೆಯ ಬಾಯಿ ಮುಚ್ಚಿ ಕತ್ತು ಹಿಸುಕಿ ಹತ್ಯೆ ಮಾಡಿದ್ದರು. ನಂತರ ಮೃತದೇಹವನ್ನು ಹತ್ತಿರದ ಚರಂಡಿ ಪೈಪ್ನಲ್ಲಿ ಮುಚ್ಚಿಟ್ಟಿದ್ದರು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿದ್ದರು.