ಕೊಲೆ ಆರೋಪಿ ಬದಲು ಹಸು ಹುಡುಕುವ ಪೊಲೀಸರು| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ವ್ಯವಸ್ಥೆಯ ದುರುಪಯೋಗ ಎಂದ ಹೈಕೋರ್ಟ್​
  • ನಾಲ್ವರ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು: ಎರಡು ಹಸುಗಳು ಕಾಣೆಯಾಗಿ ಸುಮಾರು ಎರಡು ವರ್ಷಗಳ ನಂತರ ನೀಡಿದ ದೂರು ಆಧರಿಸಿ ಕ್ರಿಮಿನಲ್​ ಪ್ರಕರಣ ದಾಖಲಿಸಿದ್ದ ಪೊಲೀಸರ ವರ್ತನೆಯನ್ನು ಖಂಡಿಸಿರುವ ಹೈಕೋರ್ಟ್​, ಇದು ಕ್ರಿಮಿನಲ್​ ನ್ಯಾಯವ್ಯವಸ್ಥೆಯ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆ ಎಂದಿದೆ.
ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ತೌಟನಹಳ್ಳಿಯ ಮಂಗಳಮ್ಮ, ಚೇತನ್​, ಸೌಮ್ಯಾ ಮತ್ತು ಚಂದನ್​ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸುವ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
2024ರ ಆಗಸ್ಟ್​ನಲ್ಲಿ ಮೆಯಲು ಹೋಗಿದ್ದ ಹಸು ಹಿಂದಿರುಗಿಲ್ಲ ಎಂದು ಎರಡು ವರ್ಷದ ನಂತರ ಎಂ.ಕೆ. ದೊಡ್ಡಿಯ ಪ್ರಸಾದ್​ ಎಂಬುವರು ದೂರು ನೀಡಿದ್ದಾರೆ. ಇದು ಕ್ರಿಮಿನಲ್​ ನ್ಯಾಯವ್ಯವಸ್ಥೆಯ ದುರುಪಯೋಗವಾಗಿದ್ದು, ಅದಕ್ಕೆ ಪೊಲೀಸರು ಬೆಂಬಲಿಸಿದ್ದಾರೆ. ಅತಿಯಾದ ವಿಳಂಬದ ನಂತರ ದೂರು ದಾಖಲಾದಾಗ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ನೇರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಜಿದಾರರಿಗೆ ನೋಟಿಸ್​ ನೀಡಿದ್ದಾರೆ. 
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಪೊಲೀಸರ ವರ್ತನೆ ಹೇಗಿದೆಯೆಂದರೆ ಯಾರಾದರೂ ಕೊಲೆಯಾಗಿದೆ ಎಂದು ದೂರು ನೀಡಿದರೆ ಇರಿ, ನಾವು ಹಸು ಹುಡುಕುತ್ತಿದ್ದೇವೆ ಎಂದು ಹೇಳುವಂತಿದೆ. ಪ್ರಾಣಿಗಳನ್ನು ಹುಡುಕಬಾರದು ಎಂದು ಹೇಳುತ್ತಿಲ್ಲ. ಆದರೆ, ಇಷ್ಟು ವಿಳಂಬದ ನಂತರ ಕ್ರಿಮಿನಲ್​ ಪ್ರಕರಣ ದಾಖಲಿಸಿರುವುದನ್ನು ಒಪ್ಪಲಾಗದು ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಗೊಳಿಸಿತು. ದೂರುದಾರರು ಸಿವಿಲ್​ ನ್ಯಾಯಾಲಯದ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಈ ವೇಳೆ ತಿಳಿಸಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net