ಸಿದ್ದು-ಡಿಕೆಶಿಗೆ ಹೈಕಮಾಂಡ್ ಕರೆ: ನಾಳೆ CM-DCM ಬ್ರೇಕ್​ಫಾಸ್ಟ್​ ಮೀಟಿಂಗ್​

CM-DCM
CM-DCM
Published on
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ನಡುವಿನ ಫೈಟ್ ದಿನೇದಿನೇ ತಾರಕಕ್ಕೇರಿದೆ. ಇದರ ನಡುವೆ ಕಾಂಗ್ರೆಸ್ ಹೈಕಮಾಂಡ್ ಇದೀಗ​ ಇಬ್ಬರ ನಾಯಕರಿಗೆ ಹೊಸ ಸಂದೇಶ ರವಾನಿಸಿದೆ.
ಹೌದು, ಇಬ್ಬರು ನಾಯಕರು ಮಾತನಾಡಿಕೊಂಡು ದೆಹಲಿಗೆ ಬರುವಂತೆ ಹೈಕಮಾಂಡ್​ ಸೂಚನೆ ನೀಡಿದೆ. ನಿಮ್ಮಿಬ್ಬರ ತೀರ್ಮಾನದ ಮೇಲೆ ನಾವು ಫೈನಲ್​ ಮಾಡಲಿದ್ದೇವೆ ಎಂದು ಹೈಕಮಾಂಡ್​ ತಿಳಿಸಿದೆ. ಈ ಹಿನ್ನಲೆ ಡಿಸಿಎಂ ಡಿಕೆ ಶಿವಕುಮಾರ್​ಗೆ, ಸಿಎಂ ಸಿದ್ದರಾಮಯ್ಯ ಅವರು ಕೆರೆ ಮಾಡಿ ನಾಳೆ(ನ.29) ಬ್ರೇಕ್​ಫಾಸ್ಟ್​ಗೆ ಬರುವಂತೆ ಹೇಳಿದ್ದಾರೆ. 
ಈ ಕುರಿತು ವಿಧಾನಸೌಧದ ಬಳಿ ಮಾತನಾಡಿರುವ ಸಿಎಂ, ಹೈಕಮಾಂಡ್​ನಿಂದ ನನಗೂ ಮತ್ತು ಡಿಕೆಗೂ ಕರೆ ಬಂದಿದೆ. ನಾಳೆ ಬ್ರೇಕ್​ಫಾಸ್ಟ್​ ಮೀಟಿಂಗ್​ ಇದೆ. ಹೈಕಮಾಂಡ್​ನವರು ಏನ್​ ಹೇಳ್ತಾರೆ ನಾವು ಅದನ್ನು ಕೇಳುತ್ತೇವೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾಣೆ ಇಲ್ಲ. ಈ ಬಗ್ಗೆ ನಾಳೆ ಚರ್ಚೆ ಮಾಡುತ್ತೇವೆ ಎಂದರು. 

ಸಿಎಂ ನಿವಾಸದಲ್ಲಿ ಬ್ರೇಕ್​ಫಾಸ್ಟ್

ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಶನಿವಾರ ಬೆಳಗ್ಗೆ 9.30ಕ್ಕೆ ಬ್ರೇಕ್​ಫಾಸ್ಟ್​ ಮೀಟಿಂಗ್​  ನಡೆಯಲಿದೆ. ಸಿಎಂ ಸ್ಥಾನದ ಫೈಟ್​ ಕೊನೆಗೂ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದ್ದು, ಇಬ್ಬರ ನಾಯಕರ ನಡುವಿನ ಸಭೆ ತೀವ್ರ ಕೂತುಹಲ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net