ಬಂಗಾರಪೇಟೆಯಲ್ಲಿ ಹೈಟೆಕ್​ ಮಾದರಿ ಶಾಲೆ Hi-tech school

ಬಂಗಾರಪೇಟೆಯಲ್ಲಿ ಹೈಟೆಕ್​ ಮಾದರಿ ಶಾಲೆ Hi-tech school
ಬಂಗಾರಪೇಟೆಯಲ್ಲಿ ಹೈಟೆಕ್​ ಮಾದರಿ ಶಾಲೆ Hi-tech school
Published on
ಬಂಗಾರಪೇಟೆ: ನಗರದಲ್ಲಿ ಟಾಟಾ ಸಂಸ್ಥೆ ಸಹಯೋಗದಲ್ಲಿ ಹೈಟೆಕ್​ ಮಾದರಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.Hi-tech school
ಸಮಸ್ಯೆಗಳು ಎಷ್ಟೇ ಇದ್ದರೂ ಶಿಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಹೊಸ ಸರ್ಕಾರಿ ಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಈ ಶಾಲೆಯನ್ನು 3.5 ಕೋಟಿ ವೆಚ್ಚದಲ್ಲಿ ಮಾದರಿ ಶಾಲೆಯನ್ನಾಗಿ ನಿರ್ಮಾಣ ಮಾಡಲಿದ್ದು, ಟಾಟಾ ಸಂಸ್ಥೆಯ ಸಿಎಸ್​ಆರ್​ ನಿಧಿಯಿಂದ ಸುಮಾರು 2.5 ಕೋಟಿ ರೂ. ಮತ್ತು ಸರ್ಕಾರದಿಂದ 1 ಕೋಟಿ ರೂ. ವೆಚ್ಚದಲ್ಲಿ ಈ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಫರ್ನಿಚರ್​, ಸಿಸಿಟಿವಿ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಬೆಲೆ ಬಾಳುವ ಈ ಜಾಗವನ್ನು ಮಕ್ಕಳ ಶೈಣಿಕ ಅಭಿವೃದ್ಧಿಗಾಗಿ ದಾನವಾಗಿ ನೀಡಿದ ಪುರಸಭೆ ಮಾಜಿ ಸದಸ್ಯ ಎಸ್​.ವಿ.ಆರ್​. ಮಣಿ ಹಾಗೂ ಅವರ ಕುಟುಂಬದ ಕೊಡುಗೆ ಸ್ಮರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲೆ ಹಿಂದಿನಿಂದ ಎಸ್​.ವಿ.ಆರ್​.ಶಾಲೆಯಾಗಿದ್ದು, ನಂತರ ಎನ್​.ಟಿ.ಜಿ.ಎಂ. ಶಾಲೆಯಾಗಿ ಸರ್ಕಾರ ನಡೆಸುತ್ತಿದೆ. ಭಾರೀ ಮಳೆಯಿಂದ ಹಳೆಯ ಕಟ್ಟಡದ ಒಂದು ಭಾಗ ಕುಸಿದ ಹಿನ್ನೆಲೆ ಮಕ್ಕಳ ಸುರತೆಗಾಗಿ ಶಾಲೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಈಗ ಕಟ್ಟಡದ ನಿರ್ಮಾಣ ಪ್ರಾರಂಭವಾಗಿದ್ದು, 8 ತಿಂಗಳೊಳಗೆ ಹೊಸ ಸರ್ಕಾರಿ ಶಾಲೆ ನಿರ್ಮಿಸಿ ಮಕ್ಕಳಿಗೆ ಸಮರ್ಪಿಸಲಾಗುತ್ತದೆ ಎಂದು ವಿವರಿಸಿದರು.
ಬಿ.ಆರ್​.ಸಿ ನಾರಾಯಣಸ್ವಾಮಿ, ಇಸಿಒ ನಾರಾಯಣಸ್ವಾಮಿ, ಪೊಲೀಸ್​ ಇನ್​ಸ್ಪೆಕ್ಟರ್​ ರವಿಕುಮಾರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net