ಗೊಬ್ಬರ, ಬಿತ್ತನೆ ಬೀಜ, ಔಷಧ, ಯಾವ ರೋಗಕ್ಕೆ ಯಾವ ಔಷಧ ಬಳಸುವುದು ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಸಹಾಯವಾಣಿಗೆ ಕರೆ ಮಾಡಿದರೆ ರೈತರಿಗೆ ಮಾಹಿತಿ ದೊರೆಯಲಿದೆ. ಧ್ವನಿ ಆಧಾರಿತ ಸಂದೇಶದ ಜತೆಗೆ ರೈತರ ಮೊಬೈಲ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ. ರಾಜ್ಯದ 80 ಲಕ್ಷಕ್ಕೂ ಅಧಿಕ ರೈತರು, ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗೆ ಅಲೆಯುವುದು ತಪ್ಪಲಿದೆ. ರೈತರನ್ನು ಸದೃಢ ಮಾಡಿದರೆ ಮಾತ್ರ ದೇಶವು ಬಲಿಷ್ಠ, ಸಮೃದ್ಧಿಯಾಗಲಿದೆ ಎಂದರು. ಹಿಂದೆ ಆಹಾರವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದವು. ಇಂದು ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ನಾವು ಬಂದಿದ್ದೇವೆ. ರಾಷ್ಟ್ರದಲ್ಲಿ ಆಹಾರ ಉತ್ಪಾದನೆ ಹೆಚ್ಚಿದ್ದು, ಕರ್ನಾಟಕ 160 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡುತ್ತಿದೆ. ಹವಾಮಾನ ವೈಪರೀತ್ಯ ಸವಾಲು ಮೆಟ್ಟಿನಿಂತು ರೈತರು, ದೇಶಕ್ಕೆ ಇನ್ನಷ್ಟು ಆಹಾರ ನೀಡಲು ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.