ಗುರುವಾರ ಪಟ್ಟಣದ ಹೆಸ್ಕಾಂ ವಿಭಾಗ ಕಚೇರಿಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ದಾಖಲೆ ಹಾಗೂ ಸಾಕ್ಷಾೃಧಾರಗಳಿಲ್ಲದೆ ನನ್ನ ವಿರುದ್ಧ ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕಾರಕ ಆರೋಪಗಳನ್ನು ಮಾಡಿದ್ದಾರೆ. ಹೆಸ್ಕಾಂನ ನಿಯಮಗಳು, ಮಾರ್ಗಸೂಚಿಗಳು ಹಾಗೂ ಸರ್ಕಾರದ ಆದೇಶಗಳಿಗೆ ಅನುಗುಣವಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇನೆ.