ವೀರಗಲ್ಲಿನ ಪಡಿಯಚ್ಚು ಸಂಗ್ರಹ

ತೆಕ್ಕಲಕೋಟೆಯಲ್ಲಿ ಹುಲಿಬೇಟೆ ವೀರಗಲ್ಲಿನ ಪಡಿಯಚ್ಚನ್ನು ಮೈಸೂರು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಪಡೆದರು.
ತೆಕ್ಕಲಕೋಟೆಯಲ್ಲಿ ಹುಲಿಬೇಟೆ ವೀರಗಲ್ಲಿನ ಪಡಿಯಚ್ಚನ್ನು ಮೈಸೂರು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಪಡೆದರು.
Published on
ಸಿರಿಗೇರಿ: ಸಮೀಪದ ತೆಕ್ಕಲಕೋಟೆಯ 14ನೇ ವಾರ್ಡ್‌ನಲ್ಲಿನ ವಾಲ್ಮೀಕಿ ನಗರದ ವಡ್ಡರ ಕಟ್ಟೆ ಹತ್ತಿರ ಹುಲಿ ಬೇಟೆ ವೀರಗಲ್ಲು ಪತ್ತೆಯಾಗಿದೆ ಎಂದು ಮೈಸೂರು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ, ಶಾಸನ ತಜ್ಞ ಅನಿಲ್ ಕುಮಾರ್ ಆರ್.ವಿ.ತಿಳಿಸಿದ್ದಾರೆ. 
‘ಭಾರತ ಶ್ರೀ’ ಯೋಜನೆಯಡಿ ತೆಕ್ಕಲಕೋಟೆ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸನಗಳ ಸಂರಕ್ಷಣೆಗೆ ನಡೆದ ಡಿಜಿಟಲೀಕರಣ ಪ್ರಕ್ರಿಯೆ ಭಾಗವಾಗಿ ಭೇಟಿ ನೀಡಿ ವೀರಗಲ್ಲಿನ ಪಡಿಯಚ್ಚು ಪಡೆದುಕೊಂಡರು.
ವೀರಗಲ್ಲಿನಲ್ಲಿ ಅನುಮಯರ ಮಗ ಹುಲಿಬೇಟೆಯಲ್ಲಿ ಮರಣ ಹೊಂದಿದ. ಆತನ ಸ್ಮರಣಾರ್ಥ ವೀರಗಲ್ಲು ಕೆತ್ತಲಾಗಿದೆ. ವೀರನು ತನ್ನ ಕೈಯಲ್ಲಿ ಖಡ್ಗ ಹಿಡಿದು ವೀರಾವೇಶದಿಂದ ಹುಲಿಯೊಡನೆ ಹೋರಾಡುತ್ತಿರುವ ದೃಶ್ಯ ಹಾಗೂ ಹುಲಿಯ ಕೆಳಭಾಗದಲ್ಲಿ ವೀರನ ಬೇಟೆಯ ನಾಯಿ ಕೂಡ ಆತನಷ್ಟೇ ಪರಾಕ್ರಮದಿಂದ ಹೋರಾಡುತ್ತಿರುವ ದೃಶ್ಯ ಶಿಲ್ಪಿಯ ಕಲೆಗಾರಿಕೆ ಕಂಡು ಬರುತ್ತದೆ. 
ಮೈಸೂರು ಶಾಸನ ನಿರ್ದೇಶಕರ ಕಚೇರಿ ಸಿಬ್ಬಂದಿ ನಾಗೇಂದ್ರ, ನಿಶಾಂತ್ ಕುಮಾರ್ ಗೌರವ್, ಇತಿಹಾಸ ಸಂಶೋಧನಾರ್ಥಿ ಮನೋಹರ ಸಿ.ಎಂ., ಎಂ. ಹೊನ್ನೂರ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net