ಹಾವು ಕಚ್ಚಿದರೆ ಗಿಡಮೂಲಿಕೆ ಚಿಕಿತ್ಸೆ

ಹಾವು ಕಚ್ಚಿದಾಗ ಚಿಕಿತ್ಸೆಗೆ ಬಳಸಲಾಗುವ ಗಿಡಮೂಲಿಕೆ ತೋರಿಸುತ್ತಿರುವ ನಾಟಿವೈದ್ಯ ಸೋಗಿ ವೀರಣ್ಣ.
ಹಾವು ಕಚ್ಚಿದಾಗ ಚಿಕಿತ್ಸೆಗೆ ಬಳಸಲಾಗುವ ಗಿಡಮೂಲಿಕೆ ತೋರಿಸುತ್ತಿರುವ ನಾಟಿವೈದ್ಯ ಸೋಗಿ ವೀರಣ್ಣ.
Published on

ಪ್ರಮುಖ ಮುಖ್ಯಾಂಶಗಳು

  • ಜೀವರಕ್ಷಕ ಸೋಗಿ ತಿಂದಪ್ಪ ಕುಟುಂಬ
ಹಗರಿಬೊಮ್ಮನಹಳ್ಳಿ: ಹಾವು ಕಚ್ಚಿದರೆ ತಾಲೂಕಿನ ಬಹುತೇಕ ಜನರು ಮೆಟ್ರಿಯ ಸೋಗಿ ತಿಂದಪ್ಪ ಕುಟುಂಬದವರ ಬಳಿ ಹತ್ತಿರ ಹೋಗುತ್ತಾರೆ. 
ಸಾರಿಗೆ ಸೌಲಭ್ಯವಿಲ್ಲದ ಮೆಟ್ರಿಯಲ್ಲಿ ಸೋಗಿ ತಿಂದಪ್ಪ ಕುಟುಂಬದವರು ಕೃಷಿ ಕಾಯಕ ಮಾಡುತ್ತಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಹಾವು ಕಚ್ಚಿದವರಿಗೆ ಗಿಡಮೂಲಿಕೆ ನೀಡುತ್ತಿದ್ದಾರೆ. ಈ ಮೂಲಕ ನೂರಾರು ಜನರ ಪ್ರಾಣ ಉಳಿಸಿದ್ದಾರೆ. ಗಿಡಮೂಲಿಕೆ ನೀಡುತ್ತಿದ್ದ ಸೋಗಿ ತಿಂದಪ್ಪ ಮೃತರಾಗಿದ್ದು, ಅವರ ಕುಟುಂಬದ ಸದಸ್ಯರು ಪರಂಪರೆ ಮುಂದುವರಿಸಿದ್ದಾರೆ. 
"

ಹಾವು ಕಚ್ಚಿದಾಗ ಸುತ್ತಮುತ್ತಲಿನ ಊರುಗಳೊಂದಿಗೆ ಬೇರೆ ಜಿಲ್ಲೆಗಳಿಂದಲೂ ಜನರು ಬಂದು ಔಷಧ ಪಡೆಯುತ್ತಾರೆ. ವಿಶೇಷ ದಿನಗಳಲ್ಲಿ ಬೇರನ್ನು ತಂದು ಜನರಿಗೆ ನೀಡುತ್ತೇವೆ. ಸೋಗಿ ವೀರಣ್ಣನಾಟಿವೈದ್ಯ, ಮೆಟ್ರಿ

— ಸೋಗಿ ವೀರಣ್ಣ ನಾಟಿವೈದ್ಯ, ಮೆಟ್ರಿ
"

ನಮ್ಮ ಅಣ್ಣನ ಮಗಳಿಗೆ ಹಾವು ಕಡಿದಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ನಾವು ಮೆಟ್ರಿ ಗ್ರಾಮಕ್ಕೆ ಬಂದು ಗಿಡಮೂಲಿಕೆ ಪಡೆದಾಗ ಗುಣಮುಖಳಾದಳು.

— ಕೆ.ಹನುಮಂತಪ್ಪ ಗ್ರಾಮಸ್ಥ, ಮುಟುಗನಹಳ್ಳಿ

ಬೇರಿನ ಔಷಧದಿಂದ ಸಾವಿರಾರು ಜನರು ಗುಣವಾಗಿದ್ದಾರೆ. ಸೋಗಿ ತಿಂದಪ್ಪ ಕುಟುಂಬದವರು ಫಲಾಪೇಕ್ಷೆ ಇಲ್ಲದೆ ಈ ಸೇವೆ ಮಾಡುತ್ತಿದ್ದಾರೆ.

— ಮುದಿಬಸಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷ, ದಶಮಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net