ಹೇಮಾವತಿ ನೀರಿನಿಂದ ಕೃಷಿಗೆ ಅನುಕೂಲ

hemavati-water-benefits-agriculture
hemavati-water-benefits-agriculture
Published on
ಬರಗೂರು : ನಲವತೆದು ವರ್ಷಗಳಿಂದ ಹೇಮಾವತಿ ನೀರು ಮದಲೂರು ಕೆರೆಗೆ ನಿರಂತರವಾಗಿ ಹರಿಯುತ್ತಿರುವುದರಿಂದ ಜನರ ಕುಡಿಯುವ ನೀರು ಹಾಗೂ ರೈತರ ಕೃಷಿ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ಟಿ.ಬಿ ಜಯಚಂದ್ರ ಹೇಳಿದರು. -agriculture
ಶಿರಾ ತಾಲೂಕು ಹುಲಿಕುಂಟೆ ಹೋಬಳಿ ದೊಡ್ಡ ಹುಲಿಕುಂಟೆ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾವರೆಕೆರೆ ಭಾಗದಿಂದ ಬೆಳೆಕೋಟೆ ಭಾಗಕ್ಕೆ ನೀರು ಹರಿಯುತ್ತಿದ್ದು, ಎಂಟು ದಿನಗಳಲ್ಲಿ ಕೆರೆ ತುಂಬಲಿದೆ. ಹುಲಿಕುಂಟೆ ಹಾಗೂ ಗೌಡಗೆರೆ ಹೋಬಳಿಗಳಿಗೆ ನೀರು ಹರಿಸುವ ಯೋಜನೆ ನನ್ನದಾಗಿದ್ದು, ಈ ಎರಡು ಭಾಗಕ್ಕೂ ನೀರು ಹರಿಸುವುದಕ್ಕೆ ಯಾವುದೇ ಸಂಶಯ ಬೇಡ. ಮೇಕೆದಾಟು ನೀರಿನ ಯೋಜನೆ ಹರಿಸುವ ಬಗ್ಗೆ ಹೋರಾಟ ಮಾಡಿದ ಪರಿಣಾಮ ಸುಪ್ರೀಂಕೋರ್ಟ್​ ತೀರ್ಪು ನಮ್ಮ ಪರವಾಗಿ ಬಂದಿದೆ. ಮೇಕೆದಾಟು ಎಲ್ಲಿಯೇ ಇರಬಹುದು ಅದನ್ನು ಬುದ್ಧಿವಂತಿಕೆಯಿಂದ ನೀರು ತರಬೇಕಿದೆ ಎಂದರು.
ಸದಸ್ಯರಾದ ದೊಡ್ಡೇಗೌಡ, ಈರಣ್ಣ, ಮಹೇಶ್​, ತೊಣಸಮ್ಮ, ಭಾರತಮ್ಮ, ಗಿರೀಶ್​, ಅಕ್ಕಮ್ಮ, ಅಮೃತಾ, ಶಶಿಕಲಾ, ಪುಟ್ಟೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ನಾಗರಾಜು, ಲೋಕೇಶ್​, ರಾಕೇಶ್​ ಬಾಬು, ಪಿಡಿಒ ತಿಪ್ಪೇಸ್ವಾಮಿ, ಕೆಎಂಎಫ್​ ಮಾಜಿ ನಿರ್ದೇಶಕ ಪ್ರಕಾಶ್​, ಲಕ್ಕನಹಳ್ಳಿ ಕುಮಾರ್​, ಬೆಜ್ಜಿಹಳ್ಳಿ ರಾಮಚಂದ್ರಪ್ಪ, ಜನಾರ್ಧನ ಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜು, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ನಾಗರಾಜು, ನಿವೃತ್ತ ಶಿಕ್ಷಕ ಶಿವರಾಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net