ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ಅಬುಕನಹಳ್ಳಿಯಲ್ಲಿನ ಹೊಸಕೆರೆ ಹಳ್ಳಿಗೆ ಸಣ್ಣ ನೀರಾವರಿ ಯೋಜನೆಯಡಿ 50 ಲಕ್ಷ ರೂಪಾಯಿ ವೆಚ್ಚದ ಪಿಕಪ್ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಈ ಬಾರಿ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಂಗಾರು ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಈ ಯೋಜನೆಯಿಂದ ಅಬುಕನಹಳ್ಳಿ, ಹಳ್ಳದ ಹೊಸಹಳ್ಳಿ, ಹಿಂಡುಮಾರನಹಳ್ಳಿ, ಗೋಟ್ಟಿಕೆರೆ ಮತ್ತು ಅದರ ಸುತ್ತ ಮುತ್ತಲ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಜತೆಗೆ ಈ ಭಾಗದ ಕೋಳವೆ ಬಾವಿಗಳಲ್ಲಿ ಅಂರ್ತಜಲದ ಮಟ್ಟ ಹೆಚ್ಚಾಗಲಿದೆ ಎಂದರು.
ಅಬುಲನಹಳ್ಳಿ ಶಿವಪ್ಪ, ಜೆಡಿಎಸ್ ಯೂತ್ ತಾಲೂಕು ಅಧ್ಯಕ್ಷ ರಂಜಿತ್ ಕುಮಾರ್, ಮುಖಂಡರಾದ ಮಾವಿನಹಳ್ಳಿ ಸಂತೋಷ್, ನಾಗರಾಜು, ಬೋರೇಗೌಡ, ಹಿಂಡುಮಾರನಹಳ್ಳಿ ನಾಗರಾಜು, ಚೆಲುವರಾಜ್, ದೇವರಾಜ್ ಮತ್ತು ಗ್ರಾಮಸ್ಥರು ಇದ್ದರು.