ವ್ಯಸನಮುಕ್ತ ಸಮಾಜ ನಿರ್ಮಿಸಲು ಸಹಕರಿಸಿ

ಕೈತನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪದ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮೋಹನ ಭಸ್ಮೆ, ಚಂದ್ರಶೇಖರ ಅಕ್ಕಿ, ದಯಾಶೀಲಾ, ಲವಕುಮಾರ ಇತರರಿದ್ದರು.
ಕೈತನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪದ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮೋಹನ ಭಸ್ಮೆ, ಚಂದ್ರಶೇಖರ ಅಕ್ಕಿ, ದಯಾಶೀಲಾ, ಲವಕುಮಾರ ಇತರರಿದ್ದರು.
Published on
ಮಮದಾಪುರ: ಮದ್ಯ ಸೇವನೆಯಿಂದ ಶರೀರದ ಜತೆಗೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಹೀಗಾಗಿ, ಮದ್ಯವ್ಯಸನ ಬಿಟ್ಟು ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಕೀರೇಶ್ವರ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಕೈತನಾಳ ನಿರುಪಾದೀಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಮಾತನಾಡಿ, ಈಚೆಗೆ ಯುವಕರು ದುಶ್ಚಟಗಳ ದಾಸರಾಗುತ್ತಿದ್ದು, ಖೇದಕರ ಸಂಗತಿ. ಆದರ್ಶ ಮೌಲ್ಯ ರೂಢಿಸಿಕೊಂಡು ಉದಾತ್ತ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಚಂದ್ರಶೇಖರ ಅಕ್ಕಿ ಮಾತನಾಡಿದರು. ಪ್ರಾದೇಶಿಕ ನಿರ್ದೇಶಕ ದಯಾಶೀಲಾ, ಜಿಲ್ಲಾ ನಿರ್ದೇಶಕ
ಎಚ್​.ಆರ್​.ಲವಕುಮಾರ, ತಾಲೂಕು ಯೋಜನಾಧಿಕಾರಿ ಎಚ್​. ರೋಹಿತ, ಮೇಲ್ವಿಚಾರಕ ಸಚ್ಚಿದಾನಂದ ಇದ್ಲಿ, ಮದ್ಯವರ್ಜನ ಸಮಿತಿ ಗೌರವಾಧ್ಯ ಸಿದ್ರಾಮಯ್ಯ ಹಿರೇಮಠ, ಮುಖಂಡರಾದ ಸಿದ್ದಪ್ಪ ದೇಸಾಯಿ, ಸಿದ್ಧಗೌಡ ಪಾಟೀಲ, ಶಂಕರ ಹುರಕಡ್ಲಿ, ಪುಂಡಲೀಕ ವಣ್ಣೂರ, ಆನಂದ ಜಗಜಂಪಿ, ಮಂಜುನಾಥ ಚಿಂಚಿ, ಶಿವಪುತ್ರ ಗೌಡರ, ಉಮೇಶ ಉಜ್ಜಕೋಪ್ಪ, ಸುರೇಶ ಬಿರಾದಾರಪಾಟೀಲ, ಭಾಸ್ಕರ ನಾಯ್ಕ್​, ರಾಮಣ್ಣ ಖಾನಾಪುರ ಇತರರಿದ್ದರು. ಮಹಾಬಲೇಶ್ವರ ಮರಾಠಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net