ನಿಯಮಗಳನ್ನು ಜಾರಿ ಮಾಡಲು ಮಕ್ಕಳ ಸುರಕ್ಷತಾ ಜಾಕೆಟ್ ಮತ್ತು ಹೆಲ್ಮೆಟ್ಗಳ ಕೊರತೆಯಿದೆ. ಇದರ ಉತ್ಪಾದನೆಗೆ ಐದರಿಂದ ಆರು ತಿಂಗಳ ಕಾಲಾವಕಾಶ ಬೇಕು ಎಂದು ಉತ್ಪಾದಕರು ತಿಳಿಸಿದ್ದಾರೆ ಎಂದು ಸರ್ಕಾರ ತಿಳಿಸಿತ್ತು. ಇದನ್ನು ಪರಿಗಣಿಸಿರುವ ಹೈಕೋರ್ಟ್, ಆದಷ್ಟು ಬೇಗ ಆದ್ಯತೆ ಮೇರೆಗೆ 6 ತಿಂಗಳೊಳಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.