ಬೀರುಗಾಳಿ ಮಳೆಗೆ ಅಪಾರ ಹಾನಿ

Heavy rains cause extensive damage
Heavy rains cause extensive damage
Published on
ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಡಿ.ಹೊಸಹಳ್ಳಿಯಲ್ಲಿ ಶನಿವಾರ ಸಂಜೆ ಸುರಿದ ಆಕಾಲಿಕ ಬಿರುಗಾಳಿ ಮಳೆಗೆ ರಾಜ್ಯ ಹೆದ್ದಾರಿ 33ರ ರಸ್ತೆ ಬದಿಯಲ್ಲಿದ್ದ ಹಲವು ಮರಗಳು ಮುರಿದು ಬಿದ್ದಿದೆ.
ಗ್ರಾಮದ ವರಲಕ್ಷ್ಮೀ ಎಂಬುವವರ ಮನೆಯ ಶೀಟ್ ಮುರಿದು ಮನೆಯಲ್ಲಿದ್ದ ವರಲಕ್ಷ್ಮೀ(36) ತಲೆಗೆ ಗಂಭೀರ ಗಾಯಗಳಾಗಿದ್ದು, ಹುಲಿಯೂರುದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್‌ಗೆ ಕರೆದೊಯ್ಯಲಾಗಿದೆ. ಗ್ರಾಮದ ಮಂಜುಳಾ (50) ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಮರದ ಕೊಂಬೆಗಳು ಬಿದ್ದಿರುವ ಕಾರಣ ಶಾಲೆಯ ಕಾಂಪೌಂಡ್ ಗೋಡೆ ಮತ್ತು ಗೇಟ್ ಗೆ ಹಾನಿಯಾಗಿದೆ.
ಗ್ರಾಮದಲ್ಲಿ ಮಂಜುನಾಥ, ಸಂಜಿವಯ್ಯ, ಗುರುರಾಜ್, ನಂಜಪ್ಪ, ರಾಮಚಂದ್ರಪ್ಪ, ರಾಜಣ್ಣ,ಭಾರತಿ ಗೋಲ್ಲರಹಟ್ಟಿ ಗ್ರಾಮದ ಶಿವಲಿಂಗಮ್ಮ ಎಂಬುವವರ ಮನೆಗಳ ಮೇಲ್ಛಾವಣೆಯು ಮಳೆಗಾಳಿಗೆ ಹಾರಿಹೊಗಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹುಲಿಯೂರುದುರ್ಗ ಉಪ ತಹಸೀಲ್ದಾರ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿ ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದರು. ಘಟನೆಯ ಸ್ಥಳಕ್ಕೆ ಭಾನುವಾರ ಕುಣಿಗಲ್ ತಹಸೀಲ್ದಾರ್ ಕರಿಯನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net