ಕೆ.ಆರ್.ಸಾಗರ: ಭಾನುವಾರ ಸುಮಾರು ಅರ್ಧ ತಾಸು ಕೆ.ಆರ್.ಸಾಗರ ಸೇರಿದಂತೆ ಸುತ್ತಮುತ್ತ ಜೋರಾಗಿ ಮಳೆ ಸುರಿಯಿತು.
ಬೃಂದಾವನದಲ್ಲಿ ಕೂಡ ಉತ್ತಮ ಮಳೆಯಾಗಿದ್ದು, ಮಳೆಯಲ್ಲಿ ಬೃಂದಾವನದ ಸೊಬಗನ್ನು ಪ್ರವಾಸಿಗರು ಸವಿಯುತ್ತಿರುವ ದೃಶ್ಯ ಕಂಡು ಬಂತು. ಭಾನುವಾರ ಸಂಜೆ ಸುರಿದ ಮಳೆಗೆ ರಸ್ತೆಯ ತುಂಬೆಲ್ಲ ನೀರು ಹರಿಯಿತು.
ಕೆಲ ಪ್ರವಾಸಿಗರು ಬೃಂದಾವನಕ್ಕೆ ಹೋಗದೆ ವಾಪಸ್ ತೆರಳಿದರು. ಈ ಭಾರಿ ನಿಗದಿಯಂತೆ ಮಳೆಯಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.