ಜಿಲ್ಲಾದ್ಯಂತ ಸಂಪೂರ್ಣ ಹದಮಳೆ

ಬಾಗಲಕೋಟೆ ವಲ್ಲಭಭಾಯಿ ವೃತ್ತದಲ್ಲಿ ಹಣ್ಣಿನ ವ್ಯಾಪಾರಿ ಶಬ್ಬೀರ ಭಾಗವಾನ ಅವರ ಮನೆಯ ಮೇಲ್ಛಾವಣೆ ಸಂಪೂರ್ಣ ಕಳಚಿ ಬಿದ್ದಿದ್ದು, ಮನೆಯಲ್ಲಿದ್ದ ಮಾವಿನ ಹಣ್ಣಿನ ಬುಟ್ಟಿಗಳು, ದವಸ ಧಾನ್ಯ ಎಲ್ಲವೂ ಹಾಳಾಗಿರುವುದು.
ಬಾಗಲಕೋಟೆ ವಲ್ಲಭಭಾಯಿ ವೃತ್ತದಲ್ಲಿ ಹಣ್ಣಿನ ವ್ಯಾಪಾರಿ ಶಬ್ಬೀರ ಭಾಗವಾನ ಅವರ ಮನೆಯ ಮೇಲ್ಛಾವಣೆ ಸಂಪೂರ್ಣ ಕಳಚಿ ಬಿದ್ದಿದ್ದು, ಮನೆಯಲ್ಲಿದ್ದ ಮಾವಿನ ಹಣ್ಣಿನ ಬುಟ್ಟಿಗಳು, ದವಸ ಧಾನ್ಯ ಎಲ್ಲವೂ ಹಾಳಾಗಿರುವುದು.
Published on
ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕು ಹೊರತುಪಡಿಸಿ ಉಳಿದಂತೆ ಜಿಲ್ಲಾದ್ಯಂತ ಶನಿವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ. ಮುಂಗಾರು ಮಳೆ ವಿಳಂಬದಿAದ ಆತಂಕಗೊAಡಿದ್ದ ರೈತರಿಗೆ ಕೊನೆಗೂ ರೋಹಿಣಿ ಮಳೆ ಹದವಾಗಿ ಸುರಿದಿದೆ.
ಶನಿವಾರ ಸಂಜೆ ೬ ಗಂಟೆಗೆ ಶುರುವಾದ ಮಳೆಯ ಅಬ್ಬರ ಗಂಟೆ ಕಾಲ ಜೋರಾಗಿ ಅಬ್ಬರಿಸಿತು. ಬಳಿಕ ಜಿಟಿಜಿಟಿಯಾಗಿ ಸುರಿಯಲಾರಂಭಿಸಿದ ಮಳೆ ತಡರಾತ್ರಿವರೆಗೂ ಮುಂದುವರೆದಿತ್ತು.
ಆರಂಭದಲ್ಲಿ ಯಾವುದೇ ಗುಡುಗು, ಮಿಂಚು, ಗಾಳಿಯ ಆರ್ಭಟ ಇಲ್ಲದೇ ಅಬ್ಬರಿಸಿ ಮಳೆ ೯ ಗಂಟೆಯ ನಂತರ ಜನರು ಬೆಚ್ಚಿಬೀಳುವಂತೆ ಗುಡುಗುಗಳ ಅಬ್ಬರ ನಡೆಯಿತು. ಸಿಡಿಲಿನ ಅಬ್ಬರಕ್ಕೆ ಯಾವುದೇ ಜನ-ಜಾನುವಾರ ಪ್ರಾಣಾಪಾಯ ಸಂಭವಿಸಿದ ವರದಿಯಾಗಿಲ್ಲ.
ಮಳೆಯ ಅಬ್ಬರಕ್ಕೆ ಜಿಲ್ಲೆಯ ವಿವಿಧೆಡೆ ಮಣ್ಣಿನ ಮನೆಗಳಿಗೆ ಹಾನಿಯಾಗಿರುವ ವರದಿಯಾಗಿದ್ದು, ಎಲ್ಲೆಲ್ಲೆ ಎಷ್ಟೆಷ್ಟು ಮನೆಗಳಿಗೆ ಹಾನಿಯಾಗಿದೆ ಎನ್ನುವ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲ. ವರುಣನ ಆರ್ಭಟಕ್ಕೆ ಬಾಗಲಕೋಟೆ ನವಗರ ವಲ್ಲಭಭಾಯಿ ವೃತ್ತದಲ್ಲಿ ಮಣ್ಣಿನ ಮನೆಯ ಮೇಲ್ಛಾವಣೆ ಸಂಪೂರ್ಣ ಕಪ್ಪರಿಸಿ ಬಿದ್ದಿದ್ದು, ಅದೃಷ್ಟವೆಂಬAತೆ ಸ್ವಲ್ಪದರಲ್ಲೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ರಾತ್ರಿ ಬಹುತೇಕ ಜಿಲ್ಲಾದ್ಯಂತ ಮಳೆ ಆಗಿದ್ದು, ಬಾಗಲಕೋಟೆ ತಾಲೂಕಿನಲ್ಲಿ ಗರಿಷ್ಠ ೨೫ ಎಂಎA ಮಳೆ ಆಗಿದೆ. ಬಾದಾಮಿ ೧೪.೮, ಗುಳೇದಗುಡ್ಡ ೧೫.೮, ಹುನಗುಂದ ೨೩.೯, ಇಳಕಲ್ಲ ೧೨.೯, ಜಮಖಂಡಿ ೨.೨, ಮುಧೋಳ ೮.೧ ಹಾಗೂ ಬೀಳಗಿ ತಾಲೂಕಿನಲ್ಲಿ ೧೩.೯ ಎಂಎA ಮಳೆ ಆಗಿರುವ ವರದಿಯಾಗಿದೆ.
ತಂದೆ-ಮಗನ ಜೀವ ಉಳಿಸಿದ ಬೆಕ್ಕು...!
ಶನಿವಾರ ಸಂಜೆ ಮಳೆ ಅಬ್ಬರಕ್ಕೆ ಬಾಗಲಕೋಟೆ ವಲ್ಲಭಭಾಯಿ ವೃತ್ತದಲ್ಲಿ ಮಣ್ಣಿನ ಮನೆಯ ಮೇಲ್ಛಾವಣೆ ಸಂಪೂರ್ಣ ಮುಗುಚಿ ಬಿದ್ದಿದೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಇಡೀ ಮೇಲ್ಛಾವಣೆ ಬಿದ್ದು ತಂದೆ-ಮಗನ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಕೊನೆ ಕ್ಷಣದಲ್ಲಿ ಇಬ್ಬರು ಜೀವವನ್ನು ಮನೆಯಲ್ಲಿ ಸಾಕಿದ್ದ ಬೆಕ್ಕು ಉಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಣ್ಣಿನ ವ್ಯಾಪಾರಿ ಶಬ್ಬೀರ್ ಬಾಗವಾನ ಎನ್ನುವವರ ಮನೆ ಮಳೆಗೆ ಬಿದ್ದಿದೆ. ಮನೆಯಲ್ಲಿ ಎಲ್ಲರೂ ಮದುವೆಗೆಂದು ವಿಜಯಪುರದಲ್ಲಿ ಇದ್ದರು. ಮನೆಯಲ್ಲಿ ಶಬ್ಬೀರ ಹಾಗೂ ಅವರ ಪುತ್ರ ಆರ್ಬಾಜ್ ಇದ್ದರು. ಮನೆಯಲ್ಲಿ ಬೆಕ್ಕಿಗೆ ಏನಾದರೂ ಕೊಡಬೇಕು ಎಂದು ಬಂದಿದ್ದರು. ಅಷ್ಟರಲ್ಲಿ ಮನೆಯ ಮೇಲ್ಛಾವಣೆಯ ಮಣ್ಣು ಉದುರಿ ಬೀಳಲಾರಂಭಿಸಿತು. ಆಗ ತಕ್ಷಣವೇ ಬೆಕ್ಕು ಮನೆಯಿಂದ ಆಚೆ ಓಡಿ ಹೋಯಿತು. ಆಗ ಬೆಕ್ಕು ಹಿಡಿದುಕೊಂಡು ಬರಲು ಶಬ್ಬೀರ ಹಾಗೂ ಆರ್ಬಾಜ್ ಇಬ್ಬರು ಮನೆಯಿಂದ ಹೊರಗೆ ನಡೆದರು. ಸ್ವಲ್ಪ ಹೊತ್ತಿನಲ್ಲೆ ಇಡೀ ಮನೆಯ ಮೇಲ್ಛಾವಣೆ ಕುಸಿದು ಬಿದ್ದಿದೆ. ಹೀಗಾಗಿ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದಿದ್ದರಿಂದ ಮನೆಯಲ್ಲಿ ಸಂಗ್ರಹಿಸಿದ್ದ ಮಾವಿನಹಣ್ಣು, ದವಸ ಧಾನ್ಯ, ಪಾತ್ರೆ ಪಗಡೆಗಳೆಲ್ಲವೂ ಹಾನಿಯಾಗಿವೆ.
ಬೆಕ್ಕು ಓಡಿ ಹೋಗಿದ್ದರಿಂದ ಅದನ್ನು ಹಿಡಿಯಲೆಂದು ನಾವಿಬ್ಬರೂ ಹೊರಗೆ ಬಂದೇವು, ಅಷ್ಟರಲ್ಲೆ ಮನೆ ಸಂಪೂರ್ಣವಾಗಿ ಬಿದ್ದಿತು. ನಾವು ಬೆಕ್ಕು ಬೆನ್ನು ಹತ್ತಿ ಹೊರಗೆ ಬರದೇ ಇದ್ದರೆ ನಮ್ಮ ಜೀವ ಉಳಿಯುತ್ತಿರಲಿಲ್ಲ ಎಂದು ಅರ್ಬಾಜ್ ಬಾವುಕರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net