27 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

Heart surgery successful for 27 children
Heart surgery successful for 27 children
Published on
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿನ ಮಧುಸೂದನ ಸಾಯಿ ವೈದ್ಯಕಿಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೈಗೊಂಡಿದ್ದ ಮಕ್ಕಳ ಉಚಿತ ಹೃದಯ ಚಿಕಿತ್ಸೆ ವಿಶೇಷ ಶಿಬಿರದಲ್ಲಿ 27 ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಸಂಕೀರ್ಣ ಹೃದಯ ಸಮಸ್ಯೆ ಹೊಂದಿದ್ದ ಮಕ್ಕಳ ಪೈಕಿ ಹಲವರ ರೋಗದ ಸ್ಥಿತಿ ಗಂಭೀರವಾಗಿತ್ತು. ಇದರ ಚಿಕಿತ್ಸೆ ದುಬಾರಿ. ಇದೇ ಕಾರಣಕ್ಕೆ ಕೆಲ ಪ್ರತಿಷ್ಠಿತ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ&ಚಿಕಿತ್ಸೆ ನಿರಾಕರಿಸಿದ್ದವು. ಇದರ ನಡುವೆ ಈ ಸಂಕೀರ್ಣ ಸಮಸ್ಯೆಯುಳ್ಳ ಮಕ್ಕಳಿಗೆ ಮಧುಸೂದನ ಸಾಯಿ ವೈದ್ಯಕಿಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ವೈದ್ಯರು ಚಿಕಿತ್ಸೆ ನೀಡಿ, ಜೀವವನ್ನು ಕಾಪಾಡಿದ್ದಾರೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ.
"

ಖಾಸಗಿ ಆಸ್ಪತ್ರೆಯಲ್ಲಿ ಮಗ ಅಬ್ದುಲ್​ ಶಸ್ತ್ರಚಿಕಿತ್ಸೆಗೆ ಎರಡು, ಮೂರು ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂಬುದಾಗಿ ತಿಳಿಸಿದ್ದರು. ಬಡವರಾದ ನಮಗೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಉಚಿತ ಚಿಕಿತ್ಸೆ, ವಾಸ್ತವ್ಯ, ಆಹಾರ ಸೌಲಭ್ಯ ಸಿಕ್ಕಿತು.

> ಚಳ್ಳಕೆರೆಯ ರಫೀಕ್​ ಅಹ್ಮದ್​, ಚಿತ್ರದುರ್ಗ

ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಒನ್​ ವರ್ಲ್ಡ್​ ಒನ್​ ಫ್ಯಾಮಿಲಿ ಮಿಷನ್​ ಹಾಗೂ ಯುನೈಟೆಡ್​ ಕಿಂಗ್​ಡಮ್​ ಮೂಲದ ಹೀಲಿಂಗ್​ ಲಿಟಲ್​ ಹಾರ್ಟ್ಸ್​ ಫೌಂಡೇಷನ್​ ಶಿಬಿರ ಕೈಗೊಂಡಿತ್ತು. ಇದರಲ್ಲಿ ಕರ್ನಾಟಕ ಸೇರಿ ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು&ಕಾಶ್ಮೀರ ರಾಜ್ಯಗಳಿಂದಲೂ ರೋಗಿಗಳು ಭಾಗವಹಿಸಿದ್ದರು. ಬೇರೆಡೆ ಲಾಂತರ ರೂ. ವೆಚ್ಚವಾಗುವ ಚಿಕಿತ್ಸೆಯನ್ನು ಇಲ್ಲಿ ಉಚಿತವಾಗಿ ನೆರವೇರಿಸಿದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಕಾರಿಯಾಗಿದೆ.
"

ಮ್ಮ ಮಗಳು ಸ್ವಾತಿಯ ಚಿಕಿತ್ಸೆಗೆ ಎಲ್ಲ ಕಡೆ ಅಲೆದಿದ್ದೆವು. ಆದರೆ ಅಲ್ಲಿ ನೀಡಿದ ಚಿಕಿತ್ಸೆ ಫಲಕಾರಿ ಆಗಿರಲಿಲ್ಲ. ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮಗಳಿಗೆ ಹೊಸ ಬದುಕು ದೊರೆತಂತಾಗಿದೆ.

> ರೂಬಿ, ಲಖನೌ

ಗಂಭೀರ ಸ್ಥಿತಿಯಲ್ಲಿದ್ದ ಹಾಗೂ ಇತರಡೆ ನಿರಾಕರಿಸಲ್ಪಟ್ಟವರಿಗೆ ಉಚಿತ ಚಿಕಿತ್ಸೆ ಸೇವೆ ಸಿಕ್ಕಿದ್ದು ವರ್ಷಕ್ಕೆ 6 ಬಾರಿ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net