ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ

ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಆರ್​.ವಿ.ಪಾಟೀಲ, ಸದಾಶಿವ ಕೌಜಲಗಿ, ಈಶ್ವರ ಗಡಾದ ಇತರರಿದ್ದರು.
ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಆರ್​.ವಿ.ಪಾಟೀಲ, ಸದಾಶಿವ ಕೌಜಲಗಿ, ಈಶ್ವರ ಗಡಾದ ಇತರರಿದ್ದರು.
Published on
ಸವದತ್ತಿ: ಜಿಲ್ಲಾಸ್ಪತ್ರೆಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ತಾಲೂಕು ಆಸ್ಪತ್ರೆಗಳಲ್ಲೂ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಿಸಲು ರಾಜ್ಯದಲ್ಲಿ ತಾಲೂಕು ಆಸ್ಪತ್ರೆಗಳು 24/7 ಸಾರ್ವಜನಿಕ ಸೇವೆಗೆ ಸಿದ್ಧವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್​ ತಿಳಿಸಿದರು.
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್​ ಟಕಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಸವದತ್ತಿಯ ತಾಯಿ&ಮಕ್ಕಳ ಆಸ್ಪತ್ರೆಯಲ್ಲಿ 9 ಐಸಿಯು ವ್ಯವಸ್ಥೆಗೆ ಅನುಮೋದನೆ ದೊರೆತಿದೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ತಾಲೂಕಿಗೆ 100 ಹಾಸಿಗೆಗಳ ಆಸ್ಪತ್ರೆ ಅಗತ್ಯವಾಗಿತ್ತು. ಮಂಜೂರಾತಿಗೆ ಮಾಡಿದ ಸರ್ಕಾರ ಮತ್ತು ಸಚಿವರಿಗೆ ಧನ್ಯವಾದ. ಮುನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಯರಗಟ್ಟಿ ಸಮುದಾಯ ಆರೋಗ್ಯವನ್ನು ಕೇಂದ್ರ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಆರ್​.ವಿ.ಪಾಟೀಲ, ಸದಾಶಿವ ಕೌಜಲಗಿ, ಜಿಲ್ಲಾ ಗ್ಯಾರಂಟಿ ಅಧ್ಯ ವಿನಯ ನಾವಲಗಟ್ಟಿ, ಡಿಎಚ್​ಒ ಈಶ್ವರ ಗಡಾದ, ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ, ವಾಯವ್ಯ ಸಾರಿಗೆ ನಿಗಮದ ಅಧ್ಯ ಸುನೀಲ ಹನಮನ್ನರ, ವಿಭಾಗೀಯ ಜಂಟಿ ನಿರ್ದೇಶಕಿ ಪುಷ್ಪಾ ಎಚ್​.ಆರ್​., ಎಂ.ಎಸ್​.ಪುರದಗುಡಿ, ಟಿಎಚ್​ಒ ಡಾ.ಶ್ರೀಪಾದ ಸಬನೀಸ್​, ಅಶೋಕ ಮುರಗೋಡ, ಲತ್​ೀ ಸವದತ್ತಿ, ಮೊಹಮ್ಮದಸಲೀಂ ಕಿತ್ತೂರು,
ರಿಜ್ವಾನ್​ ದೇಸಾಯಿ, ಡಾ.ಬಿ.ವಿ.ಕಾಡರಕೊಪ್ಪ, ಡಾ.ಸತೀಶ ಕಬಾಡೆ, ಡಾ.ಪ್ರತಾಪ್​ಸಿಂಗ್​ ರಜಪೂತ, ಡಾ.ಪ್ರಗತಿ ಬೊರಗಾಂವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net