ಮುಧೋಳ ನಗರದ ಕೆ.ಆರ್. ಲಕ್ಕಂ ಮೆಮೋರಿಯಲ್ ಸಿಬಿಎಸ್‌ಇ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ವೈದ್ಯಕೀಯ ಉಚಿತ ತಪಾಸಣಾ ಶಿಬಿರವನ್ನು ಡಾ.ವೈ.ಆರ್. ಹುಂಡೇಕರ್ ಉದ್ಘಾಟಿಸಿದರು. ಅಪ್ಪಾಸಾಹೇಬ ಲಕ್ಕಂ, ಸುನಂದಾ ಲಕ್ಕಂ, ಶಾಲೆಯ ಪ್ರಾಂಶುಪಾಲ ಡಾ.ಸರ್ರಾಜ್ ಖಾನ್ . ಕುಮಾರಿ ರಾಜೇಶ್ವರಿ ಮಾಂಗ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಲಕ್ಕಂ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ
ವಿದ್ಯಾರ್ಥಿಗಳಿಗೆ ಆರೋಗ್ಯ ಉಚಿತ ತಪಾಸಣೆ
ಮುಧೋಳ: ತಡೆಗಟ್ಟುವಿಕೆ ಚಿಕಿತ್ಸೆಗಿಂತ ಉತ್ತಮ ಎಂಬ ಮಂತ್ರದೊಂದಿಗೆ ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿ ಮತ್ತು ಸ್ವಚ್ಛತೆಯನ್ನು ಅಳವಡಿಸಿಕೊಂಡು ಸದೃಢರಾಗಬೇಕು. ಆರೋಗ್ಯವೇ ಜೀವನದ ನಿಜವಾದ ಸಂಪತ್ತು ಎಂದು ಸಿದ್ಧಾರ್ಥ ಫಾರ್ಮಸಿ ಕಾಲೇಜ್ ಪ್ರಾಚಾರ್ಯ ಡಾ.ವೈ.ಆರ್. ಹುಂಡೇಕರ ಹೇಳಿದರು.
ನಗರದ ಕೆ.ಆರ್. ಲಕ್ಕಂ ಮೆಮೋರಿಯಲ್ ಸಿಬಿಎಸ್‌ಇ ಶಾಲೆಯಲ್ಲಿ ಸೋಮವರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ಸಮಾಜದಲ್ಲಿ ನಿರ್ವಹಿಸುವ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ರೋಗಿಗಳ ಪಾಲಿನ ದೇವರಾಗಿ ಅವರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಲ್ಮೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮೋಹನ್ ಬಿರಾದಾರ ಮಾತನಾಡಿ, ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಜೀವನದ ಉಳಿದೆಲ್ಲ ಸಾಧನೆಗಳೂ ಶೂನ್ಯವಾಗುತ್ತವೆ. ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಆಹಾರ ಪದ್ಧತಿ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಡಾ.ವೈ.ಆರ್. ಹುಂಡೇಕರ ನೇತೃತ್ವದಲ್ಲಿ ಸಿದ್ಧಾರ್ಥ ಫಾರ್ಮಸಿ ಕಾಲೇಜಿನ ವೈದ್ಯಕೀಯ ತಂಡದ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯ ಸಂಬಂಧಿತ ತಪಾಸಣೆ ಹಾಗೂ ಅಗತ್ಯ ಸಲಹೆಗಳನ್ನು ನೀಡಲಾಯಿತು.
ಅಪ್ಪಾಸಾಹೇಬ ಲಕ್ಕಂ, ಸುನಂದಾ ಲಕ್ಕಂ, ಶಾಲೆಯ ಪ್ರಾಂಶುಪಾಲ ಡಾ. ಸರ್ರಾಜ್ ಖಾನ್ . ಕುಮಾರಿ ರಾಜೇಶ್ವರಿ ಮಾಂಗ ಇತರರಿದ್ದರು.