ಶ್ರಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಸಹಾಯಕ

ಬಸವನಹಳ್ಳಿ ಲ್ಯಾಂಪ್ಸ್ ಸಭಾಂಗಣದಲ್ಲಿ ನಡೆದ ಉಚಿತ ಅರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಮಾತನಾಡಿದರು. ಎಸ್.ಆರ್. ಅರುಣ್ ರಾವ್, ವಿ.ಸಿ.  ಅಮೃತ್, ಎಸ್.ಆರ್. ಸುನಿಲ್ ರಾವ್, ಪಿ.ಬಿ. ಮೋಹನ್ ಇತರರಿದ್ದರು.
ಬಸವನಹಳ್ಳಿ ಲ್ಯಾಂಪ್ಸ್ ಸಭಾಂಗಣದಲ್ಲಿ ನಡೆದ ಉಚಿತ ಅರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಮಾತನಾಡಿದರು. ಎಸ್.ಆರ್. ಅರುಣ್ ರಾವ್, ವಿ.ಸಿ. ಅಮೃತ್, ಎಸ್.ಆರ್. ಸುನಿಲ್ ರಾವ್, ಪಿ.ಬಿ. ಮೋಹನ್ ಇತರರಿದ್ದರು.
Published on
ಕುಶಾಲನಗರ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ, ಯಶಸ್ವಿನಿ ಟ್ರಸ್ಟ್, ಸ್ಮಿತಾ ಐ ಕೇರ್, ಆಶೋದಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ಬಸವನಹಳ್ಳಿ ಲ್ಯಾಂಪ್ಸ್ ಸಭಾಂಗಣದಲ್ಲಿ ಗುರುವಾರ ಅರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಮಿಕ ವರ್ಗದವರಿರುವ ಈ ಪ್ರದೇಶದಲ್ಲಿ ಇಂತಹ ಅರೋಗ್ಯ ತಪಾಸಣಾ ಶಿಬಿರ ಹಲವು ಜನರಿಗೆ ಪ್ರಯೋಜನವಾಗುತ್ತದೆ. ಈ ಶಿಬಿರಕ್ಕೆ ವಿವಿಧ ಸಂಘಟನೆಗಳು ಸಹಕಾರ ನೀಡುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಇಂತಹ ಆರೋಗ್ಯ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ. ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಪ್ರಾರಂಭಗೊಂಡು 5 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರ ಒಂದು ಭಾಗವಾಗಿ ಅರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಏರ್ಪಡಿಸಲಾಗಿದೆ ಎಂದರು.
ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್. ಅರುಣ್‌ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ನಿರ್ದೇಶಕ ವಿ.ಸಿ. ಅಮೃತ್, ಎಸ್.ಆರ್. ಸುನಿಲ್‌ರಾವ್, ಸೋಮವಾರಪೇಟೆ ತಾಲೂಕು ಸಿಡಿಒ ಪಿ.ಬಿ. ಮೋಹನ್, ಸ್ಮಿತಾ ಐ ಕೇರ್‌ನ ಡಾ. ಪ್ರಶಾಂತ್, ಯಶಶ್ವಿನಿ ಸಂಯೋಜನಾಧಿಕಾರಿ ಚೇತನ್, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕರು, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net