ಆರೋಗ್ಯ ಬಗ್ಗೆ ಕಾಳಜಿವಹಿಸಿ

ಆರೋಗ್ಯ ಬಗ್ಗೆ ಜಾಗೃತಿ ಅವಶ್ಯ
ಆರೋಗ್ಯ ಬಗ್ಗೆ ಜಾಗೃತಿ ಅವಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಬಿ‌.ಕೆ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಯಶಸ್ವಿ
  • ಚಿಕ್ಕೋಡಿ ಪಟ್ಟಣದ ಬಿ ಕೆ ಕಾಲೇಜು
  • ವಿವಿದ ಇಲಾಖೆ ಸಂಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ

ಆರೋಗ್ಯದ ಬಗ್ಗೆ ಜಾಗೃತಿ ಅವಶ್ಯ
| ಆರೋಗ್ಯ ಶಿಕ್ಷಣಾಧಿಕಾರಿ ಅಕ್ಕಮಹಾದೇವಿ ಗುಳಿದಾಳ ಸಲಹೆ | ಜಾಗೃತಿ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಕ್ಷಯರೋಗವು ಸಂಪೂರ್ಣವಾಗಿ ಗುಣ ಪಡಿಸಬಹುದಾದ ಕಾಯಿಲೆ, ರೋಗದ ಲಕ್ಷಣಗಳು ಕಂಡು ಬಂದರೆ ಎಚ್ಚತ್ತುಕೊಂಡು ಸಂಪರ್ಕಿಸಬೇಕು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅಕ್ಕಮಹಾದೇವಿ ಗುಳಿದಾಳ ಸಲಹೆ ಸೂಚನೆ.
ಪಟ್ಟಣದ ಕೆಎಲ್‌ಇ ಸೊಸೈಟಿಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಸಿಸಿ,ಎನ್‌ಎಸ್‌ಎಸ್‌, ವೈಆರ್‌ಸಿ ಜಿಲ್ಲಾ ಕ್ಷಯರೋಗ ಘಟಕ ನಿಯಂತ್ರಣ ಕೇಂದ್ರ ಹಾಗೂ ತಾಲೂಕು ಆರೋಗ್ಯ ಇಲಾಖೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕ್ಷಯರೋಗ , ಎಚ್‌ಐವಿ,ಏಡ್ಸ್ ಹಾಗೂ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ನಡೆಸಿದರು.
ಎರಡು ವಾರಕ್ಕಿಂತ ಹೆಚ್ಚುಕಾಲ ತೀವ್ರ ಜ್ವರ,ಕಫ,ರಾತ್ರಿ ವೇಳೆ ಜ್ವರ ಬರುವುದು ಕಂಡು ಬಂದರೆ ನಿರ್ಲಕ್ಷÈವಹಿಸದೆ ಚಿಕಿತ್ಸೆ ಪಡೆಯಬೇಕು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಪಾಟೀಲ, ಜಿಲ್ಲಾ ಕ್ಷಯರೋಗ ಜಾಗೃತಿ ಅಧಿಕಾರಿ ಆರ್.ಬಿ.ಕಾಶಪ್ಪನವರ, ಜಿಲ್ಲಾ ಎಚ್‌ಐವಿ ಮತ್ತು ಏ ಜಾಗೃತಿ ಅಧಿಕಾರಿ ವಿ.ಎಚ್.ದೊಡ್ಡಮನಿ, ಜಿಲ್ಲಾ ಆರೋಗ್ಯ ಸಂಯೋಜಕ ಅಮಿತ್ ನೆಲ್ಲಿ, ತಾಲೂಕು ಟಿಬಿ ಮುಖ್ಯಾಧಿಕಾರಿ ಪ್ರವೀಣ ಬಾಗೋಜಿ ಸಂಪೂರ್ಣ ಆರೋಗ್ಯ ಜಾಗೃತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸುಧೀರ ಕೋಠಿವಾಲೆ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಜಾಗೃತರಾಗುತ್ತಿದ್ದಾರೆ ಸಮಾಜದಲ್ಲಿಯೂ ಆರೋಗ್ಯ ಅರಿವು ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಎನ್‌ಸಿಸಿ ಲೆಫ್ಟಿನೆಂಟ್ ಸಿದ್ದಣ್ಣ ನಾಯಕ್,ವೈಆರ್‌ಸಿ ಅಧಿಕಾರಿ ಡಾ.ಬಿ.ಎಂ.ಪಾಟೀಲ್,ಎನ್‌ಎಸ್‌ಎಸ್ ಅಧಿಕಾರಿ ಪ್ರದೀಪ ಸಂಗಪ್ಪಗೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net