ಮೊಬೈಲ್​ ಆಂಬ್ಯುಲೆನ್​ನಿಂದ ಆರೋಗ್ಯ ಕಾಳಜಿ

Health Care by Mobile Ambulance
Health Care by Mobile Ambulance
Published on
ಶಿರಾ: ಗ್ರಾಮೀಣ ಭಾಗದ ಜನರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಚಿಕಿತ್ಸೆ ಪಡೆಯಲು ನಗರದ ಆಸ್ಪತ್ರೆಗೆ ಹೋಗುವುದಿಲ್ಲ. ಈಗ ಮೊಬೈಲ್​ ಆಂಬ್ಯುಲೆನ್ಸ್​ ವೈದ್ಯಕಿಯ ತಪಾಸಣೆ ವಾಹನದಿಂದ ಗ್ರಾಮೀಣರಿಗೆ ಅನುಕೂಲವಾಗಲಿದೆ ಎಂದು ಜೆಡಿಎಸ್​ ಮುಖಂಡ ಆರ್​.ವೆಂಕಟೇಶ್​ ತಿಳಿಸಿದರು.
ರಾಶಿ ಸೀಡ್ಸ್​ ಸಂಸ್ಥೆಯಿಂದ ತುಮಕೂರು ಜಿಲ್ಲೆಗೆ ನೀಡಲಾದ ಉಚಿತ ಮೊಬೈಲ್​ ವೈದ್ಯಕಿಯ ಸೇವೆ ವಾಹನಕ್ಕೆ ತಾಲೂಕಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಈ ವಾಹನ ಪ್ರತಿಯೊಂದು ಗ್ರಾಮಕ್ಕೂ ಹೋಗುವುದರಿಂದ ಗ್ರಾಮೀಣರಿಗೆ ಸ್ಥಳಿಯವಾಗಿ ಆರೋಗ್ಯ ತಪಾಸಣೆ ಸಾಧ್ಯವಾಗುತ್ತದೆ ಎಂದರು.
ಮೊಬೈಲ್​ ಚಿಕಿತ್ಸಾ ವಾಹನದಲ್ಲಿ ವೈದ್ಯರು ಹಾಗೂ ಸಹಾಯಕರು ಇರುವುದರಿಂದ ಔಷಧಗಳು ಸಹ ಉಚಿತವಾಗಿ ನೀಡಲಾಗುತ್ತದೆ. ಕಂಪನಿ ನಿಗದಿಪಡಿಸಿದ ದಿನಾಂಕದಂದು ಆಯಾ ಗ್ರಾಮಕ್ಕೆ ಮೊಬೈಲ್​ ಸೇವೆ ಒದಗಿಸಲಾಗುತ್ತದೆ ಎಂದರು.
ಶಿರಾ ಭಾಗದ ರೈತರಿಗೆ ರಾಶಿ ಸೀಡ್ಸ್​ ಸಂಸ್ಥೆಯು ಆರೋಗ್ಯ ಭಾಗ್ಯ, ರೈತರು ಹತ್ತಿ ಬೆಳೆಯಲು ಬೇಕಾಗುವ ಸೀಡ್ಸ್​ ಗೊಬ್ಬರ ಹಾಗೂ ವ್ಯವಸಾಯಕ್ಕೆ ತಗಲುವ ವೆಚ್ಚ ನೀಡುತ್ತಿದೆ. ಇದಲ್ಲದೆ ಮಕ್ಕಳಿಗೆ ಉಚಿತ ಸೈಕಲ್​ ವಿತರಣೆ ಮಾಡುತ್ತಿರುವುದು ಶ್ಲಾನೀಯ ಎಂದರು.
ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕ ಡಿ.ಶ್ರೀನಿವಾಸ್​, ಎಪಿಎಂಸಿ ಕಾರ್ಯದರ್ಶಿ ಅನುರಾಧಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್​, ರಾಶಿ ಸೀಡ್ಸ್​ ಭಾಸ್ಕರ್​, ಜಯಪ್ರಕಾಶ್​ ನಾರಾಯಣಸ್ವಾಮಿ, ವಿವೇಕಾನಂದ, ದೇವರಾಜ್​, ಚಿದಾನಂದ ಮೂರ್ತಿ, ರಾಘವೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net