2028ಕ್ಕೆ ಎಚ್​ಡಿಕೆ ಸಿಎಂ ಆಗೋದು ನಿಶ್ಚಿತ / NELAMANGAL

ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಜೆಡಿಎಸ್​ನಿಂದ ಹಣ್ಣು ವಿತರಣೆ.
ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಜೆಡಿಎಸ್​ನಿಂದ ಹಣ್ಣು ವಿತರಣೆ.
Published on
ನೆಲಮಂಗಲ : ಎಚ್​.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮಾದರಿ ಆಡಳಿತ ನೀಡಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಜನ್ಮದಿನದ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಜೆಡಿಎಸ್​ನಿಂದ ಹಣ್ಣು ವಿತರಿಸಿ ಮಾತನಾಡಿದರು.
ಕುಮಾರಸ್ವಾಮಿ ರೈತರ ಸುಮಾರು 30 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ತಲುಪಿಸಿದ್ದಾರೆ. ಅಶಕ್ತರು, ಮಹಿಳೆಯರು, ಅಂಗವಿಕರಿಗೆ ವಿವಿಧ ಸೌಲಭ್ಯ ಜಾರಿಗೊಳಿಸಿ ಜನನಾಯಕ ಎನಿಸಿಕೊಂಡಿದ್ದಾರೆ. ಆದ್ದರಿಂದ 2028ಕ್ಕೆ ರಾಜ್ಯದಲ್ಲಿ ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದರು.
ಕಳೆದ ಬಾರಿ ಶಾಸಕನಾಗಿದ್ದಾಗ 100 ಹಾಸಿಗೆಯುಳ್ಳ ಆಸ್ಪತ್ರೆ ನಿಮಾರ್ಣಕ್ಕೆ ಮೈಲನಹಳ್ಳಿ ಬಳಿ 5 ಎಕರೆ ಮಂಜೂರು ಮಾಡಿದ್ದೆ. ಈಗಿನ ಶಾಸಕರು ಆಸ್ಪತ್ರೆ ನಿಮಾರ್ಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ಜೆಡಿಎಸ್​ ನಗರ ಅಧ್ಯಕ್ಷ ಕೆಂಪಲಿಂಗನಹಳ್ಳಿ ವಿಷ್ಣು, ನಗರಸಭೆ ಸದಸ್ಯ ಶಿವಕುಮಾರ್​, ಆಂಜಿನಪ್ಪ, ಅಂಜನಮೂರ್ತಿ, ಜೆಡಿಎಸ್​ ತಾಲೂಕು ಕಾರ್ಯಾಧ್ಯಕ್ಷ ಬೂದಿಹಾಲ್​ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್​, ವಕ್ತಾರ ಕನಕರಾಜು, ಜೆಡಿಎಸ್​ ಕಸಬಾ ಅಧ್ಯಕ್ಷ ರಮೇಶ್​, ತಾಪಂ ಮಾಜಿ ಸದಸ್ಯ ವರದನಾರಾಯಣ್​, ರುದ್ರೇಶ್​, ಮುಖಂಡರಾದ ರಾಜಣ್ಣ, ಭೀಮರಾಜು, ಶೇಖರ್​, ರಂಗಸ್ವಾಮಿ, ಸುರೇಂದ್ರ, ಉಮೇಶ್​, ಕೃಷ್ಣ, ಯಶವಂತ್​, ಶಿವಕುಮಾರ್​, ಮಂಜಮ್ಮ ಇತರರು ಇದ್ದರು.
ಸಿಹಿ ಹಂಚಿ ಸಂಭ್ರಮ : ನೆಲಮಂಗಲ ತಾಲೂಕು ಕಚೇರಿ ಮುಂಭಾಗ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಾವೇಶಗೊಂಡ ಪಕ್ಷದ ನೂರಾರು ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಕುಮಾರಸ್ವಾಮಿ ಅವರ ಜನ್ಮದಿನ ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net