ಬಿಡದಿ ರೈತರ ಸಂಕಷ್ಟಕ್ಕೆ ಎಚ್.ಡಿ.ಕುಮಾರಸ್ವಾಮಿ ಕಾರಣ Road
Road ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಕೊಡಿಯಾಲ ಗ್ರಾಮದ ಕಾಲನಿಯಲ್ಲಿ 54 ಲಕ್ಷ ರೂ. ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಕೊಡಿಯಾಲ ಮಹದೇವು, ಚೇಳೂರು ಶಿವನಂಜಪ್ಪ, ರಂಗಧಾಮು, ಶಾರದಮ್ಮ ಇದ್ದರು.
Published on:
Copied
Follow Us
ಗುಬ್ಬಿ: ಎಚ್.ಡಿ.ಕುಮಾರಸ್ವಾಮಿ ಅವರ ಯೋಜನೆಯಾಗಿದ್ದ ಬಿಡದಿ Road ಟೌನ್ಶಿಪ್ ನಿಮಾರ್ಣಕ್ಕೆ ಒಳಪಡುವ ಗ್ರಾಮಗಳ ಜಮೀನನ್ನು ರೆಡ್ ಝೊನ್ ಎಂದು ಗುರುತಿಸಿ ಹಾಗೆಯೇ ಬಿಟ್ಟು ಈಗ ಯೋಜನೆಗೆ ವಿರೋಧ ಎನ್ನುತ್ತಿದ್ದಾರೆ. ಹೇಳೋದು ಒಂದು ಮಾಡೋದು ಒಂದು. ಮನಸ್ಸಿನಲ್ಲಿ ಬರಿಯ ದ್ವೇಷ ಅಸೂಯೆ ಇದೆ. ರೈತರ ಸಂಕಷ್ಟಕ್ಕೆ ಅವರೇ ಕಾರಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.
ತಾಲೂಕಿನ ಚೇಳೂರು ಹೋಬಳಿ ಕೊಡಿಯಾಲ ಗ್ರಾಮದ ಕಾಲನಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 54 ಲಕ್ಷ ರೂ. ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ರೆಡ್ ಝೊನ್ ಎಂದು ಗುರುತು ಮಾಡಿದ ನಂತರದಲ್ಲಿ ಅಲ್ಲಿನ ರೈತರು ಜಮೀನು ಯಾವುದೇ ರೀತಿಯಲ್ಲಿ ಅಭಿವೃದ್ಧಿ ಮಾಡುವಂತಿಲ್ಲ. ಪರಭಾರೆ ಮಾಡಲಿಕ್ಕೆ ಆಗೋದಿಲ್ಲ. ಹೀಗೆ ಅಲ್ಲಿನ ರೈತರನ್ನು ಕಷ್ಟಕ್ಕೆ ಸಿಲುಕಿಸಿ ಈಗ ಅವರ ಮುಂದೆ ಹೋರಾಟ ಎನ್ನುತ್ತಾ ಓಡಾಡ್ತಾರೆ ಎಂದು ಕಿಡಿಕಾರಿದರು.
ಕೇಂದ್ರ ಸಚಿವರಾಗಿ ಒಂದು ಕೈಗಾರಿಕೆ ರಾಜ್ಯಕ್ಕೆ ತರಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ತಕ್ಷಣ ಅವರ ಮೇಲಿನ ದ್ವೇಷ ಮತ್ಸರ ಹೆಚ್ಚು ಮಾಡಿಕೊಂಡು ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲ್ಲ ಎಂದು ಹೇಳುತ್ತಾರೆ. 18 ಸೀಟು ಪಡೆದು ಇವರು ಒಪ್ಪಿ ಏನೂ ಆಗಬೇಕಿಲ್ಲ. ಸುಖಾಸುಮ್ಮನೆ ಒಕ್ಕಲಿಗ ಮುಖಂಡರ ಬೆಳವಣಿಗೆ ಸಹಿಸದೆ ತುಳಿಯುವುದು ಹೇಗೆ ಎಂದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬರಗಾಲ ರಾಜ್ಯದಲ್ಲಿ ಕಂಡ ತಕ್ಷಣ ರಾಜ್ಯ ಸರ್ಕಾರ ಅರ್ಲಟ್ ಘೋಷಿಸಿ ಎಲ್ಲ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಭೆ ನಡೆಸಿ ಟಾಸ್ಕ್ ಫೋರ್ಸ್ ಮೂಲಕ ತುರ್ತು ಕ್ರಮಕ್ಕೆ ಸೂಚಿಸಲಾಗಿದೆ. ಮೇವು ಕಿಟ್ ವಿತರಣೆ, ಪಶು ಇಲಾಖೆ ಹಾಗೂ ಹಾಲು ಒಕ್ಕೂಟ ಮೂಲಕ ನಡೆಸಲಾಗುತ್ತಿದೆ. ಪ್ರತಿ ತಾಲೂಕಿಗೆ 80 ಲಕ್ಷ ರೂ. ನೀಡಿ ತುರ್ತು ಕ್ರಮಕ್ಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದ ಶಾಸಕರು, ಹೂವಿನಕಟ್ಟೆ ಎರಡು ಹಾಸ್ಟೆಲ್ಗಳಿಗೆ ನೀರಿನ ಅಭಾವ ವಿಚಾರ ತಿಳಿದ ತಕ್ಷಣ ಎರಡು ಪ್ರತ್ಯೇಕ ಬೋರ್ ಕೊರೆಸಲಾಯಿತು. ಈ ಪೈಕಿ ಒಂದು ವಿಫಲವಾಗಿದೆ. ಮತ್ತೊಂದು ಬೋರ್ ಕೊರೆಸಲು ಸೂಚಿಸಲಾಗಿದೆ ಎಂದರು.
ಮುಖಂಡರಾದ ಪುಷ್ಪ, ರಾಮಕೃಷ್ಣಪ್ಪ, ವಜ್ರಯ್ಯ, ರವಿ, ಗುತ್ತಿಗೆದಾರ ಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಚಂದ್ರಶೇಖರ್ ಇತರರು ಇದ್ದರು.