ನಾಗೇಂದ್ರನಮಟ್ಟಿಯ ಹುಸೇನ್‌ಖಾನ್ ಪಠಾಣ ಎಂಬುವರು ಬ್ಯಾಂಕ್ ಒಂದರಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಪಠಾಣ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಹೀಗಾಗಿ, ಅವರ ಪತ್ನಿ ಶಬಾನಬಾನು ಅವರ ಅದೇ ಬ್ಯಾಂಕ್‌ನ ಖಾತೆಗೆ ಜಮೆಯಾಗಿದ್ದ ಗೃಹಲಕ್ಷ್ಮೀ ಹಣವನ್ನು 11,000 ರೂ. ಹಾಗೂ 4,000 ರೂ. ಸೇರಿ 15,000 ರೂ.ಗೆ ಕತ್ತರಿ ಹಾಕಿದ್ದಾರೆ.