ನಗರದ ಹಳ್ಳದ ಸೇತುವೆ ಪಕ್ಕದಲ್ಲಿಯೇ ಜನರು ರಾಶಿ&ರಾಶಿ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದಾರೆ, ಅದರಿಂದ ಕೆಟ್ಟ ದುರ್ವಾಸನೆಯಿಂದ ನಗರ ಪ್ರವೇಶಿಸುವ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಕಾರಣ ಅಲ್ಲಿ ಕಸ ಹಾಕುವರನ್ನು ಗಮನಿಸಿ, ಜಾಗೃತಿ ಮೂಡಿಸಿ, ಒಂದು ವೇಳೆ ಅವರು ಪರಿವರ್ತನೆಯಾಗದಿದ್ದರೆ ದಂಡ ವಿಧಿಸಿ, ಮೊದಲು ಅಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಂಜಿನಿಯರ್ಗಳಾದ ಪರಶುರಾಮ, ಹಣಮಂತ, ಪೌರಾಯುಕ್ತ ಉಮೇಶ ಚವ್ಹಾಣ್, ಸಾಯಿಬಣ್ಣ ಕೆಂಗೂರಿ, ಗುತ್ತಿಗೆದಾರ ಮೋಹನ ರಾಠೋಡ, ಚನ್ನಕೇಶವಗೌಡ ಬಾಣತಿಹಾಳ ಇತರರಿದ್ದರು.